





ಪಟ್ಟೆ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ದರ್ಬೆತಡ್ಕದಲ್ಲಿ ನ.22ರಂದು ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ 6 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.



ಕಿರಿಯರ ವಿಭಾಗದಲ್ಲಿ ರಶ್ಮಿತ್ 4ನೇ ತರಗತಿ ಕ್ಲೇ ಮಾಡಲಿಂಗ್ ಪ್ರಥಮ, ಪರೀಕ್ಷಿತ್ ಬಿ.ಸಿ 4ನೇ ತರಗತಿ ಆಶು ಭಾಷಣ ಪ್ರಥಮ, ಹಿರಿಯರ ವಿಭಾಗದಲ್ಲಿ ಶನ್ಮಿತಾ ಕೆ 7ನೇ ತರಗತಿ ಕನ್ನಡ ಕಂಠಪಾಠ ಪ್ರಥಮ, ಫಿದಾ ಫಾತಿಮಾ ಬೀವಿ 7ನೇ ತರಗತಿ ಇಂಗ್ಲೀಷ್ ಕಂಠಪಾಠ ಪ್ರಥಮ, ಮಾನ್ವಿ ರೈ 5 ನೇ ತರಗತಿ ಕಥೆ ಹೇಳುವುದು ಪ್ರಥಮ ಹಾಗೂ ಚಿಂತಶ್ರೀ 5ನೇ ತರಗತಿ ಸಂಸ್ಕೃತ ಧಾರ್ಮಿಕ ಪಠಣ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.





ಉಳಿದಂತೆ ಕಿರಿಯರ ವಿಭಾಗದಲ್ಲಿ ದಿಶಾಲಿ ಎಸ್ ಪಿ 4ನೇ ತರಗತಿ ಕಥೆ ಹೇಳುವುದು ತೃತೀಯ, ಅಸ್ಮಿತಾ ಎ 4ನೇ ತರಗತಿ ಅಭಿನಯ ಗೀತೆ ತೃತೀಯ ಹಾಗೂ ಹಿರಿಯರ ವಿಭಾಗದಲ್ಲಿ ಸಾತ್ವಿಕಾ ಎಸ್ ಎನ್ 6ನೇ ತರಗತಿ ಕ್ಲೇ ಮಾಡಲಿಂಗ್ ದ್ವಿತೀಯ ಸ್ಥಾನ ಪಡೆಯುವುದರೊಂದಿಗೆ ಒಟ್ಟು 10 ವಿದ್ಯಾರ್ಥಿಗಳು ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.
ಈ ಸಾಧನೆಯು ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಗುಣಮಟ್ಟದ ಕೈಗನ್ನಡಿಯಾಗಿದೆ ಮತ್ತು ಈ ಫಲಿತಾಂಶಕ್ಕೆ ಕಾರಣರಾದ ಶಾಲೆಯ ಎಲ್ಲಾ ಶಿಕ್ಷಕ ವರ್ಗದವರು ಅಭಿನಂದನೆಗಳಿಗೆ ಅರ್ಹರು ಎಂದು ದ್ವಾರಕಾ ಪ್ರತಿಷ್ಠಾನ (ರಿ) ಪುತ್ತೂರು ಹಾಗೂ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ. ವಿಜೇತರಾದ ಎಲ್ಲಾ ವಿದ್ಯಾರ್ಥಿಗಳನ್ನು ಸಂಚಾಲಕ ವಿಘ್ನೇಶ್ ಹಿರಣ್ಯ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಗುರುಗಳಾದ ರಾಜಗೋಪಾಲ ಎನ್, ಪ್ರೌಢ ಶಾಲಾ ವಿಭಾಗದ ಮುಖ್ಯ ಗುರುಗಳಾದ ಸುಮನಾ ಬಿ ಹಾಗೂ ಎಲ್ಲಾ ಶಿಕ್ಷಕರು ಅಭಿನಂದಿಸಿದ್ದಾರೆ.






