ಪುತ್ತೂರು ಜಾತ್ರೆ- ಎ.8ಕ್ಕೆ ಹಸಿರುವಾಣಿ ಸಮರ್ಪಣಾ ಕಾರ್ಯಕ್ರಮ

0

ದರ್ಬೆ, ಬೊಳುವಾರಿನಿಂದ ಹಸಿರುವಾಣಿ ಮೆರವಣಿಗೆ – ಚಿಂತನಾ ಸಭೆ

  • ಹಸಿರು ವಾಣಿ ಸಂಗ್ರಹಕ್ಕೆ ದರ್ಬೆ, ಬೊಳುವಾರಿನಲ್ಲಿ ಪ್ರತ್ಯೇಕ ಕೌಂಟರ್
  • ಚೆಂಡೆ, ಗೊಂಬೆ ಕುಣಿತ, ಕುಣಿತ ಭಜನೆ ಮೆರವಣಿಗೆ ಆಕರ್ಷಣೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಎ.8ರಂದು ಹಸಿರುವಾಣಿ ಸಮರ್ಪಣಾ ಮೆರವಣಿಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಕುರಿತು ಚಿಂತನಾ ಸಭೆ ಮಾ.30ರಂದು ದೇವಳದ ಆಡಳಿತ ಕಚೇರಿಯಲ್ಲಿ ಜರಗಿತು.

ಪುತ್ತೂರು ಜಾತ್ರೆಗೆ ಲಕ್ಷಾಂತರ ಮಂದಿ ಸೇರುವ ಹಿನ್ನಲೆಯಲ್ಲಿ ಪ್ರತಿದಿನ ಅನ್ನಪ್ರಸಾದ ವಿತರಣಾ ಕಾರ್ಯಕ್ರಮ ನಡೆಯಲಿದ್ದು ಇದಕ್ಕೆ ಪೂರಕವಾಗಿ ಹಸಿರುವಾಣಿ ಸಮರ್ಪಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಎ.8ರಂದು ದರ್ಬೆ ಮತ್ತು ಬೊಳುವಾರಿನಿಂದ ಏಕಕಾಲದಲ್ಲಿ ಹಸಿರುವಾಣಿ ಮೆರವಣಿಗೆ ನಡೆಸುವುದು. ಆ ದಿನ ವಿವಿಧ ಕಡೆಗಳಿಂದ ಹಸಿರುವಾಣಿ ಹೊತ್ತ ವಾಹನಗಳು ದರ್ಬೆ ರೈ ಸರ್ವೀಸ್ ಸ್ಟೇಶನ್ ಪಕ್ಕ ಇರುವ ನೇಸರ ರವಿ ಶೆಟ್ಟಿ ಕತಾರ್ ರವರ ಸ್ಥಳದಲ್ಲಿ ಸೇರುವುದು.

ಬೊಳ್ವಾರು ಮಾರ್ಗವಾಗಿ ಬರುವ ಹಸಿರುವಾಣಿ ವಾಹನಗಳು ಬೊಳ್ವಾರಿನ ಸುಬ್ರಹ್ಮಣ್ಯ ನಗರದಲ್ಲಿ ಸೇರುವುದು. ಎರಡೂ ಕಡೆ ಹೊರೆಕಾಣಿಕೆಗೆ ಸಂಬಂಧಿಸಿ ಕೌಂಟರ್ ತೆರೆಯವುದು, ಪೇಟೆಯ ಭಕ್ತಾದಿಗಳಾದ ವರ್ತಕ ಬಂಧುಗಳು ಶ್ರೀದೇವರಿಗೆ ಸಲ್ಲಿಸುವ ಹೊರೆಕಾಣಿಕೆಯನ್ನು ಸ್ವೀಕರಿಸಲು ದರ್ಬೆ ಅಥವಾ ಬೊಳ್ವಾರು 2 ಕಡೆಗಳಿಂದಲೂ ವಾಹನದ ವ್ಯವಸ್ಥೆ ಮಾಡುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು.

ಚಿಂತನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು ಮಾತನಾಡಿ ಸೀಮೆಗೊಳಪಟ್ಟ ಎಲ್ಲಾ ದೇವಸ್ಥಾನಗಳು ಹಾಗೂ ಶ್ರದ್ಧಾ ಕೇಂದ್ರಗಳಿಂದ ಹಸಿರುವಾಣಿಯನ್ನು ಸಂಗ್ರಹಿಸಿ ಶ್ರೀಕ್ಷೇತ್ರಕ್ಕೆ ಒಪ್ಪಿಸುವ ಕಾರ್ಯಕ್ರಮದ ಕುರಿತು ಚರ್ಚಿಸಿದರು. ಮುರಳಿಕೃಷ್ಣ ಹಸಂತಡ್ಕ, ಅರುಣ್‌ಕುಮಾರ್ ಪುತ್ತಿಲ, ಸೀತಾರಾಮ ರೈ ಕೆದಂಬಾಡಿ ಗುತ್ತು, ಅಜಿತ್ ರೈ ಹೊಸಮನೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಮೆರವಣಿಗೆಯಲ್ಲಿ ಗೊಂಬೆ ಕುಣಿತ, ಚೆಂಡೆಗಳೊಂದಿಗೆ ಕುಣಿತ ಭಜನಾ ತಂಡಗಳನ್ನು ಸೇರಿಸಿಕೊಳ್ಳುವುದಾಗಿ ಸಲಹೆ ಪಡೆಯಲಾಯಿತು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ ಗೌಡ, ರಾಮಚಂದ್ರ ಕಾಮತ್, ಶೇಖರ್ ನಾರಾವಿ, ಬಿ. ಐತ್ತಪ್ಪ ನಾಯ್ಕ್ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

LEAVE A REPLY

Please enter your comment!
Please enter your name here