ನೀತಿ ಸಂಹಿತೆ ಹಿನ್ನೆಲೆ – ತೆರವಿಗೆ ಬಾಕಿಯಿರುವ ಬಂಟಿಂಗ್ಸ್, ಬ್ಯಾನರ್ ತೆರವುಗೊಳಿಸಿ ವರದಿ ನೀಡಲು ಜಿಲ್ಲಾಧಿಕಾರಿ ಸೂಚನೆ

0

ಪುತ್ತೂರು: ಕರ್ನಾಟಕ ರಾಜ್ಯ ವಿಧಾನ ಸಭೆಗೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಇನ್ನೂ ತೆರವಿಗೆ ಬಾಕಿ ಇರುವ ಬ್ಯಾನರ್ ಬಂಟಿಂಗ್ಸ್, ಫಲಕ, ಗೋಡೆ ಬರಹಗಳನ್ನು ತೆರವು ಮಾಡಿ ವರದಿ ನೀಡುವಂತೆ ಜಿಲ್ಲಾಧಿಕಾರಿಯಿಂದ ನಗರಸಭೆಗೆ ನೋಟೀಸ್ ಬಂದಿದೆ.

ಈ ಹಿನ್ನೆಲೆಯಲ್ಲಿ ನಗರಸಭೆ ಜಾಹಿರಾತು ಫಲಕಗಳನ್ನು ತೆರವು ಕಾರ್ಯಾಚರಣೆ ಮಾಡಿದ್ದು, ಇದರ ಜೊತೆಗೆ 2022-2023ನೇ ಸಾಲಿಗೆ ಜಾಹಿರಾತು ಫಲಕಗಳಿಗೆ ಶುಲ್ಕ ಪಾವತಿಸದೇ ಇರುವ ಎಲ್ಲ ಅನಧಿಕೃತ ಫಲಕಗಳನ್ನು ಸೋಮವಾರದಿಂದ ಕೀಳಿಸಿ ಯಾ ಪೈಂಟ್ ಎರಚಿ ವಿರೂಪಗೊಳಿಸಲಾಗುವುದು ಹಾಗೂ ದಂಡ ಸಹಿತ ಶುಲ್ಕ ವಸೂಲಿ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರಸಭೆ ಪ್ರಕಟಣೆ ನೀಡಿದೆ.

LEAVE A REPLY

Please enter your comment!
Please enter your name here