ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2021-2022ನೇ ಸಾಲಿನ ಬಿ.ಎಡ್ ಅಂತಿಮ ಸೆಮಿಸ್ಟ್‌ರ್ ಪರೀಕ್ಷೆಯಲ್ಲಿಕಾಲೇಜಿಗೆ ವಿವೇಕಾನಂದ ಬಿ.ಎಡ್ ಕಾಲೇಜಿಗೆ ಶೇ.ನೂರು ಫಲಿತಾಂಶ ಬಂದಿರುತ್ತದೆ.
ಅಂತಿಮ ಸೆಮಿಸ್ಟ್‌ರ್ ಪರೀಕ್ಷೆಗೆ ಒಟ್ಟು 47 ಪ್ರಶಿಕ್ಷಣಾರ್ಥಿಗಳು ಹಾಜರಾಗಿದ್ದು, 46 ಪ್ರಶಿಕ್ಷಣಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 1 ಪ್ರಶಿಕ್ಷಣಾರ್ಥಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿರುತ್ತಾರೆ. 34 ಪ್ರಶಿಕ್ಷಣಾರ್ಥಿಗಳು ಶೇ.80ಕ್ಕಿಂತ ಅಧಿಕ ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಪಾಸಾಗಿರುತ್ತಾರೆ.
ಶ್ರೀದೇವಿ ಕೆ. ಹೆಗ್ಡೆ ಶೇ.90.66ದೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿರುತ್ತಾರೆ. ಇವರು ಪರ್ಲಡ್ಕ ಶ್ರೀನಿವಾಸ್ ಕೆ. ಹೆಗ್ಡೆ ಮತ್ತು ಶೋಭಾ ಶ್ರೀನಿವಾಸ್ ಹೆಗ್ಡೆ ದಂಪತಿ ಪುತ್ರಿಯಾಗಿರುತ್ತಾರೆ. ರಂಜಿತಾ ಯಂ. ಶೇ.90 ಅಂಕದೊಂದಿಗೆ ದ್ವಿತೀಯ ಸ್ಥಾನಿಯಾಗಿರುತ್ತಾರೆ. ಇವರು ಪುಣಚ ಮಲ್ಯ ನಿವಾಸಿ ಶಂಕರನಾರಾಯಣ ಭಟ್ ಮತ್ತು ಸುಮಶಂಕರನಾರಾಯಣ ಭಟ್ ದಂಪತಿ ಪುತ್ರಿಯಾಗಿರುತ್ತಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.