ಸವಣೂರು ಕಂರ್ಬಡ್ಕದಲ್ಲಿ ದೊಂಪದ ಬಲಿ ನೇಮೋತ್ಸವ

0

ಪುತ್ತೂರು: ಗ್ರಾಮ ದೈವ ಶಿರಾಡಿ ಮತ್ತು ಪರಿವಾರ ದೈವಗಳ ದೈವಸ್ಥಾನ ಮಾಲೆತ್ತಾರು ಸವಣೂರು ಇದರ ವತಿಯಿಂದ ಸವಣೂರಿನ ಕಂರ್ಬಡ್ಕದಲ್ಲಿ ದೊಂಪದ ಬಲಿ ನೇಮೋತ್ಸವ ನಡೆಯಿತು.

ಮಾ.30 ರಂದು ರಾತ್ರಿ ಅನ್ನಸಂತರ್ಪಣೆಯ ಬಳಿಕ ಮಾಲೆತ್ತಾರು ದೈವಸ್ಥಾನದಲ್ಲಿ ದೈವಗಳ ಭಂಡಾರ ತೆಗೆದು, ಮಾಲೆತ್ತಾರಿನಿಂದ ಕಂರ್ಬಡ್ಕ ಮೂಲಸ್ಥಾನಕ್ಕೆ ದೈವದ ಭಂಡಾರವನ್ನು ಕೊಂಡೊಯ್ಯಲಾಯಿತು. ಮಾ.31ರಂದು ಪ್ರಾತಃ ಕಾಲ ದೈವದ ನೇಮೋತ್ಸವವಾಗಿ ಸಿರಿಮುಡಿ ಗಂಧಪ್ರಸಾದವನ್ನು ನೀಡಲಾಯಿತು. ಅದೇ ದಿನ ಸಾಯಂಕಾಲ ಪಟ್ಟೆಯಿಂದ ಮಾರಿ ಹೊರಟು ಗುತ್ತುಮನೆಯಲ್ಲಿ ಸೇರಿ ಬಳಿಕ ಸುಣ್ಣಾಜೆ ಬಳಿ ಬಂಗೋಲಿ ಬಣದಲ್ಲಿ ಶ್ರೀ ಶಿರಾಡಿ ದೈವ ಹಾಗೂ ಗುಳಿಗ ದೈವದ ನೇಮವಾಗಿ ಮಾರಿ ತೆರಳಿತು.

ದೈವಸ್ಥಾನದ ಆಡಳಿತದಾರರಾದ ವೆಂಕಪ್ಪ ಶೆಟ್ಟಿ ಸವಣೂರುಗುತ್ತು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪುರಂದರ ಬಾರಿಕೆ, ನಿಕಟಪೂರ್ವ ಅಧ್ಯಕ್ಷ ಪ್ರಜ್ವಲ್‌ ಕೆ.ಆರ್‌ ಕೋಡಿಬೈಲು ಹಾಗು ಊರಿನ ನೂರಾರು ಮಂದಿ ಭಾಗವಹಿಸಿದರು.

LEAVE A REPLY

Please enter your comment!
Please enter your name here