ವಿದ್ಯಾಮಾತಾ ಅಕಾಡೆಮಿಯಿಂದ ಬೇಸಿಗೆಯ ತರಬೇತಿ ಆರಂಭ…

0

ಒಂದೇ ಸೂರಿನಲ್ಲಿ ಕಂಪ್ಯೂಟರ್,ಸ್ಪೋಕನ್ ಇಂಗ್ಲೀಷ್ ,ಬ್ಯಾಂಕಿಂಗ್,ಎನ್ ಡಿ ಎ ಗೆ ವಿಶೇಷ ಶಿಬಿರ

ಪುತ್ತೂರು :ಪುತ್ತೂರಿನ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಬೇಸಿಗೆಯ ರಜೆಯ ಸಂದರ್ಭದಲ್ಲಿ ಶಿಕ್ಷಣ ಮತ್ತು ಉದ್ಯೋಗ ಕೌಶಲ್ಯತೆಯ ಪೂರ್ವತಯಾರಿಗೆ ಪೂರಕವಾಗಿ ವಿಶೇಷ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ.ಇದರಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸುಮಾರು 30 ದಿನಗಳವರೆಗೆ ಬೇಸಿಕ್ ಕಂಪ್ಯೂಟರ್ ತರಬೇತಿ (MS WORD,MS EXCEL,NUDI,POWER POINT,INTERNET, TALLY PRIME) ಪ್ರಾಕ್ಟಿಕಲ್ ಅಕೌಂಟಿಂಗ್ ಮತ್ತು ಟ್ಯಾಕ್ಸೇಷನ್TALLY,GST,TDS, INCOME TAX,RETURN FILING etc) ಅಲ್ಲದೇ ಸೈನಿಕ ಶಾಲೆ/ನವೋದಯ ಶಾಲೆಯ ಪ್ರವೇಶ ಪರೀಕ್ಷೆಗಳು ಎನ್ ಡಿ ಎ (National Defence Academy)ಐಎಎಸ್/ ಕೆಎಎಸ್/ಬ್ಯಾಂಕಿಂಗ್/ ಪೊಲೀಸ್/ ಅರಣ್ಯ ಇಲಾಖೆ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿಯನ್ನು ಮಾಡಲಾಗುತ್ತದೆ.


ಈ ಶಿಬಿರದಲ್ಲಿ 5ನೇ ತರಗತಿಯಿಂದ ಪದವಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದ್ದು ಸಾಮಾನ್ಯ ಜ್ಞಾನ,ಪ್ರಸಕ್ತ ವಿದ್ಯಾಮಾನಗಳು ,ಇಂಗ್ಲೀಷ್,ಮಾನಸಿಕ ಸಾಮರ್ಥ್ಯ,ಸರಳ ಗಣಿತ ಇತ್ಯಾದಿಗಳನ್ನು ನುರಿತ ತರಬೇತಿದಾರರು ಬೋಧಿಸಲಿದ್ದಾರೆ.ಕಳೆದ 2 ವರ್ಷಗಳಿಂದ ಭಾರತೀಯ ಸೇನೆ, ಬ್ಯಾಂಕಿಂಗ್, ಪೊಲೀಸ್,ಅರಣ್ಯ,ಕೆಎಂಎಫ್,ಶಿಕ್ಷಕರ ನೇಮಕಾತಿಗಳಲ್ಲಿ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ಆಯ್ಕೆಯಾಗುತ್ತಿರುವುದನ್ನು ಗಮನಿಸಬಹುದು.ಈ ನಿಟ್ಟಿನಲ್ಲಿ ಚಿಕ್ಕಂದಿನಿಂದಲೇ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರುಗೊಳಿಸುವುದು ಇಲ್ಲವೇ ಖಾಸಗಿ ಉದ್ಯೋಗಕ್ಕೆ ಬೇಕಾಗುವ ಉದ್ಯೋಗ ಪಡೆಯುವಂತಾಗಲು ಈ ಶಿಬಿರವು ಪೂರಕವಾಗಲಿದೆ.


ತರಗತಿಗಳು ಏಪ್ರಿಲ್ 3 ರಿಂದ ಪ್ರಾರಂಭವಾಗಲಿದ್ದು ಪ್ರವೇಶಾತಿಯನ್ನು ಪಡೆದುಕೊಳ್ಳಲು ವಿದ್ಯಾಮಾತಾ ಅಕಾಡೆಮಿ ಹಿಂದೂಸ್ತಾನ್ ಕಾಂಪ್ಲೆಕ್ಸ್ ,ಎಪಿಎಂಸಿ ರೋಡ್ ,ಸಿಟಿ ಆಸ್ಪತ್ರೆ ಹತ್ತಿರ ಪುತ್ತೂರು ಅಥವಾ 9148935808/8590773486/9620468869 ನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದೆಂದು ವಿದ್ಯಾಮಾತಾ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here