ಅಂಬಿಕಾದಲ್ಲಿ CET ಹಾಗೂ NEET ಕೋಚಿಂಗ್ ತರಗತಿ ಉದ್ಘಾಟನೆ

0

ಪುತ್ತೂರು: ಸೋಲೆಂಬುದು ಎಚ್ಚರಿಕೆಯ ಗಂಟೆ  ಹೊರತು ಸೋಲಲ್ಲ. ಮುಂದಿನ ಬೆಳವಣಿಗೆಗೆ ಅದು ಪ್ರೇರಕವೆಂದು ಪರಿಗಣಿಸಿ ಮುಂದಡಿ ಇಡಬೇಕು. ಸೋಲೇ ಗೆಲುವಿನ ಸೋಪಾನ. ನಾವು ನಮ್ಮನ್ನು ಬೇರೆಯವರಿಗೆ ಹೋಲಿಸದೆ ನಮ್ಮ ಸಾಮರ್ಥ್ಯಕ್ಕನುಗುಣವಾಗಿ ಪ್ರಯತ್ನ ಪಡಬೇಕು. ಸಕಾರಾತ್ಮಕವಾಗಿ ಆಲೋಚಿಸಿ ನಕಾರಾತ್ಮಕ ಆಲೋಚನೆಗಳಿಗೆಡೆ ಕೊಡದೆ ಮುಂದುವರಿದಾಗ ಜಯ ಲಭ್ಯ- ಎಂದು ವಿಶ್ರಾಂತ ಪ್ರಾಚಾರ್ಯ, ಸಂಪನ್ಮೂಲ ವ್ಯಕ್ತಿ  ಬಿ.ವಿ.ಸೂರ್ಯನಾರಾಯಣ ಹೇಳಿದರು.

ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪ.ಪೂ ವಿದ್ಯಾಲಯದಲ್ಲಿ NEET ಹಾಗೂ CET  ಕೋಚಿಂಗ್ ತರಗತಿಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು ಹಾಗೂ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳು ಆಹಾರ, ನಿದ್ರೆ, ಅಭ್ಯಾಸ ನಡೆಸುವ ವಿಚಾರದಲ್ಲಿ ಹೇಗೆ ನಿಯಮ ಪಾಲಿಸಿ ಶ್ರದ್ಧೆ ವಹಿಸಿ ಎಚ್ಚರ ವಹಿಸಬೇಕೆಂಬುದನ್ನು ಉದಾಹರಣೆಯೊಂದಿಗೆ ವಿದ್ಯಾರ್ಥಿಗಳಿಂದಲೇ ಪ್ರಾತ್ಯಕ್ಷಿಕೆ ನಡೆಸಿ ವಿಷದ ಪಡಿಸಿದರು.

ನಟ್ಟೋಜ ಫೌಂಡೇಶನ್ ಟ್ರಸ್ಟ್ ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜರು ವಿದ್ಯುಕ್ತವಾಗಿ  ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ನಟ್ಟೋಜ ಫೌಂಡೇಶನ್ ಟ್ರಸ್ಟ್ ನ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಬಿಕಾ ಪ.ಪೂ ವಿದ್ಯಾಲಯ ನೆಲ್ಲಿಕಟ್ಟೆಯ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಹಾಯಕ ಮುರಳಿ ಮೋಹನ್ ಸಹಕರಿಸಿದರು.

LEAVE A REPLY

Please enter your comment!
Please enter your name here