ರಾಮಕುಂಜ ಕಿಂಡರ್ ಗಾರ್ಟನ್ ಸ್ಕೂಲ್‌ನಲ್ಲಿ ಯು.ಕೆ.ಜಿ.ಮಕ್ಕಳ ಘಟಿಕೋತ್ಸವ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಕಿಂಡರ್‌ಗಾರ್ಟನ್‌ನಲ್ಲಿ ಮಾ.25ರಂದು ಗ್ರಾಜ್ಯುವೇಶನ್ ಡೇ ಆಚರಿಸಲಾಯಿತು.


ಯು.ಕೆ.ಜಿ.ಮಕ್ಕಳು ತಮ್ಮ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿ ಪ್ರಾಥಮಿಕ ಶಿಕ್ಷಣದ ಪ್ರಾರಂಭಿಕ ಹಂತವನ್ನು ತಲುಪಿದ ಸಂಭ್ರಮದಿಂದ ಘಟಿಕೋತ್ಸವದ ಉಡುಪುಗಳನ್ನು ಧರಿಸಿ ಪ್ರಮಾಣಪತ್ರಗಳನ್ನು ಸ್ವೀಕರಿಸಿದರು. ಸಂಸ್ಥೆಯ ಕಾರ್ಯದರ್ಶಿ ಸೇಸಪ್ಪ ರೈ, ಆಡಳಿತಾಧಿಕಾರಿ ಆನಂದ ಎಸ್.ಟಿ., ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿಯರು, ಶಿಕ್ಷಕರು, ಮಕ್ಕಳ ಪೋಷಕರು, ಸಿಬ್ಬಂದಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here