ಬೆಂಕಿ ಅವಘಡ ತಪ್ಪಿಸಲು ದೋಳ್ಪಾಡಿ ಪೈಕ ಅರಣ್ಯದಲ್ಲಿ ವಿದ್ಯುತ್ ಪರಿವರ್ತಕದ ಸುತ್ತಮುಳಿ ಹುಲ್ಲು ತೆರವುಗೊಳಿಸಿದ ಕಾಣಿಯೂರು ಶೌರ್ಯ ವಿಪತ್ತು ನಿರ್ವಹಣಾ ಘಟಕ

0

ಕಾಣಿಯೂರು: ದಿನದಿಂದ ದಿನಕ್ಕೆ ಬೇಸಿಗೆಯ ಧಗೆ, ಬಿಸಿಲ ಬೇಗೆ ಏರುತ್ತಲೆ ಇದೆ. ಇದರಿಂದ ಅಲ್ಲಲ್ಲಿ ಬೆಂಕಿ ಅವಘಡಗಳು ಸಂಭವಿಸುತ್ತಲೇ ಇದೆ. ಹಲವಾರು ಕಡೆಗಳಲ್ಲಿ ಬೆಂಕಿ ದುರಂತಗಳಿಂದ ಅದೇಷ್ಟೋ ನಷ್ಟಗಳು ಸಂಭವಿಸಿದೆ.

ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕಾಣಿಯೂರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಸೇರಿಕೊಂಡು ಪಂಜ ವಲಯಕ್ಕೆ ಸಂಬಂಧಪಟ್ಟ ಕಾಣಿಯೂರು ಸಮೀಪ ದೋಳ್ಪಾಡಿ ಪೈಕ ಎಂಬಲ್ಲಿ ಅರಣ್ಯ ಮೀಸಲು ಪ್ರದೇಶದಲ್ಲಿ ಹಾದು ಹೋಗುವ ವಿದ್ಯುತ್ ಪರಿವರ್ತಕದಿಂದ ಅರಣ್ಯಕ್ಕೆ ಬೆಂಕಿ ಸಂಭವಿಸುವ ಅನಾಹುತಗಳನ್ನು ತಪ್ಪಿಸಬೇಕು ಈ ನಿಟ್ಟಿನಲ್ಲಿ ಸವಣೂರು ಮೆಸ್ಕಾಂ ಅಧಿಕಾರಿಗಳ ಸಹಕಾರದೊಂದಿಗೆ ವಿದ್ಯುತ್ ಪರಿವರ್ತಕದ ಸುತ್ತಾ ಮುತ್ತ ಇರುವ ಮುಳಿ ಹುಲ್ಲು, ಪೊದರುಗಳನ್ನು ತೆರವುಗೊಳಿಸಿ ಸ್ವಚ್ಛಾಗೊಳಿಸಲಾಯಿತು. ಈ ಸಂದರ್ಭದಲ್ಲಿ ಪವರ್‌ಮ್ಯಾನ್ ನಾರಾಯಣ್, ಶೌರ್ಯ ವಿಪತ್ತು ನಿರ್ವಹಣಾ ಘಟಕ ಸಂಯೋಜಕಿ ಮನೋರಮ ನಾವೂರು, ಘಟಕದ ಅಧ್ಯಕ್ಷ ಹರೀಶ್ ಪೈಕ, ಸದಸ್ಯರಾದ ಮನೀಶ್ ನಾವೂರು, ರವೀಂದ್ರ ಮಾಳ, ತೀರ್ಥಕುಮಾರ್ ಪೈಕ, ಸುಲಕ್ಷಣ ಪೈಕ, ಭಾಸ್ಕರ ಪೂಜಾರಿ ಅಬ್ಬಡ, ಕಿಶೋರ ಕಾರಡ್ಕ ಮೋದಲಾದವರಿದ್ದರು.

LEAVE A REPLY

Please enter your comment!
Please enter your name here