ಪುತ್ತೂರು: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ 2023 ನೇ ಸಾಲಿನಲ್ಲಿ ನಡೆಸಿದ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ, ಸವಣೂರು ಚಾಪಳ್ಳ ಹಿದಾಯತುಲ್ ಇಸ್ಲಾಂ ಮದರಸ ಶೇಕಡಾ ನೂರು ಫಲಿತಾಂಶ ಪಡೆದುಕೊಂಡಿದೆ.
5ನೇ ತರಗತಿಯಲ್ಲಿ ಪರೀಕ್ಷೆ ಬರೆದ 25 ವಿದ್ಯಾರ್ಥಿಗಳಲ್ಲಿ 3 ಮಂದಿ ಡಿಸ್ಟಿಂಕ್ಷನ್, ಪ್ರಥಮ, 9 ಮಂದಿ ಪ್ರಥಮ, 8 ಮಂದಿ ದ್ವಿತೀಯ ಮತ್ತು 5 ಮಂದಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಏಳನೇ ತರಗತಿಯಲ್ಲಿ ಒಟ್ಟು ಪರೀಕ್ಷೆ ಬರೆದ 32 ವಿದ್ಯಾರ್ಥಿಗಳಲ್ಲಿ 11 ಮಂದಿ ಡಿಸ್ಟಿಂಕ್ಷನ್, 19 ಮಂದಿ ಪ್ರಥಮ, ಇಬ್ಬರು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಹತ್ತನೇ ತರಗತಿ ಹಾಗೂ 12ನೇ ತರಗತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊoದಿಗೆ ಶೇಕಡಾ ನೂರು ಫಲಿತಾಂಶ ಪಡೆದುಕೊಂಡಿದೆ ಎಂದು ಮದರಸ ಮುಖ್ಯ ಅಧ್ಯಾಪಕರಾದ ತಾಜುದ್ದೀನ್ ಫೈಝಿ ತಿಳಿಸಿದ್ದಾರೆ.