ಪಾಣಾಜೆ: ಇತಿಹಾಸ ಪ್ರಸಿದ್ಧ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದ ಆಡಳಿತ ಮೊಕ್ತೇಸರರಾಗಿ ತಾರನಾಥ ರೈ ಪಡ್ಡಂಬೈಲ್ ಗುತ್ತು ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಕಾಟುಕುಕ್ಕೆಯ ಪ್ರತಿಷ್ಠಿತ ಪಡ್ಡಂಬೈಲ್ ಗುತ್ತು ಮನೆತನದ ಅವರು ಪೆರ್ಲದಲ್ಲಿ ಕಾರ್ತಿಕೇಯ ಟಯರ್ ಇಂಡಸ್ಟ್ರೀಸ್ ಸಂಸ್ಥೆಯ ಮಾಲಕರಾಗಿ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ರಂಗದಲ್ಲಿ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದಾರೆ.
ಪಡ್ಡಂಬೈಲು ಗುತ್ತುವಿನ ದೈವಸ್ಥಾನದ ಅಭಿವೃದ್ಧಿ ಕಾರ್ಯಗಳಲ್ಲಿ ಮುಂಚೂಣಿ ವಹಿಸಿದ್ದ ರೈಗಳು ಕಳೆದ ಅವಧಿಯಲ್ಲಿ ಕಾಟುಕುಕ್ಕೆ ಕ್ಷೇತ್ರದ ಟ್ರಸ್ಟಿಗಳಲ್ಲಿ ಓರ್ವರಾಗಿ ಸೇವೆ ಸಲ್ಲಿಸಿದ್ದರು. ಆಡಳಿತ ಸಮಿತಿ ಸದಸ್ಯರಾಗಿ ರಘುರಾಮ ರೈ ಕಟ್ಟತ್ತಾಡೆ, ಸುಧಾಕರ ಮಣಿಯಾಣಿ ಕಲ್ಲಗದ್ದೆ, ಚನಿಯಪ್ಪ ನಾಯ್ಕ, ರಿತೇಶ್ ಕಿರಣ್ ಕಾಟುಕುಕ್ಕೆ ಆಯ್ಕೆಯಾಗಿದ್ದಾರೆ.
ದೇವಳದ ನೂತನ ಆಡಳಿತ ಮಂಡಳಿ ಪದಗ್ರಹಣ ಕಾರ್ಯಕ್ರಮ ಊರ ಭಕ್ತರು ಮತ್ತು ದೇವಸ್ವಂ ಆಡಳಿತ ಮಂಡಳಿ ಪ್ರತಿನಿಧಿಗಳ ಸಮ್ಮುಖದಲ್ಲಿ ದೇಗುಲದಲ್ಲಿ ನಡೆಯಿತು.
ದೇವಸ್ವಂ ಬೋರ್ಡ್ ನೀಲೇಶ್ವರದ ಕಾಸರಗೋಡು ಏರಿಯಾ ಸಮಿತಿ ಸದಸ್ಯ ಶಂಕರ ರೈ ಮಾಸ್ಟರ್, ದೇವಸ್ವಂ ಬೋರ್ಡ್ ಅಧಿಕಾರಿ ರಘು , ನಿಕಟಪೂರ್ವ ಮೊಕ್ತೇಸರ ನಾರಾಯಣನ್, ಮಾಜಿ ಮೊಕ್ತೇಸರ ಸಂಜೀವ ರೈ ಕೆಂಗನಾಜೆ, ವಿಷ್ಣು ಪ್ರಕಾಶ್ ಪಿಲಿಂಗಲ್ಲು, ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲಾ ವ್ಯವಸ್ಥಾಪಕ ಪುರುಷೋತ್ತಮ ಭಟ್ ಮಿತ್ತೂರು, ಸುಬ್ರಮಣ್ಯ ಭಟ್ ಕೋಡುಮಾಡು, ಕಾಟುಕುಕ್ಕೆ ಭಜನಾ ಸಂಘದ ಅಧ್ಯಕ್ಷ, ನಿವೃತ್ತ ಶಿಕ್ಷಕ ಲೋಕನಾಥ ಶೆಟ್ಟಿ ಮಾಯಿಲೆಂಗಿ ಉಪಸ್ಥಿತರಿದ್ದರು.