30ಕ್ಕೂ ಅಧಿಕ ವೆರೈಟಿಯ ದೋಸೆ, ವೆರೈಟಿಯ ಟೀಗಳ ರೆಸ್ಟೋರೆಂಟ್ `ದೋಸಾ ಕಾರ್ನರ್’ ಜಿ.ಎಲ್ ವನ್ ಮಾಲ್‌ನಲ್ಲಿ ಶುಭಾರಂಭ

0

ಪುತ್ತೂರು: ವಿವಿಧ ವೆರೈಟಿಯ ದೋಸೆ, ಇಡ್ಲಿ, ಪರೋಟಾ, ಟೀ, ಕಾಫೀಗಳು ಫ್ಯಾಮಿಲಿ ರೆಸ್ಟೋರೆಂಟ್ `ದೋಸಾ ಕಾರ್ನರ್’ ಎ.8ರಂದು ಮುಖ್ಯರಸ್ತೆಯ ಜಿ.ಎಲ್ ವನ್ ಮಾಲ್ 2ನೇ ಮಹಡಿಯಲ್ಲಿ ಶುಭಾರಂಭಗೊಂಡಿತು.

ನೂತನ ರೆಸ್ಟೋರೆಂಟ್‌ನ್ನು ಮಾಲ್‌ನ ಮ್ಹಾಲಕ ಬಲರಾಮ ಆಚಾರ್ಯ ಉದ್ಘಾಟಿಸಿದರು. ರೆಸ್ಟೋರೆಂಟ್‌ನ ಮ್ಹಾಲಕ ನಿರಂಜನ ರೈ ಅವರ ಪತ್ನಿ ಮಮತಾ ರೈ ಹಾಗೂ ಅವರ ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

30ಕ್ಕೂ ಅಧಿಕ ಬಗೆಯ ವೆರಾಟಿಯ ದೋಸೆಗಳು:

ರೆಸ್ಟೋರೆಂಟ್‌ನಲ್ಲಿ ವಿಶೇಷವಾಗಿ ಕುಟುಂಬಸ್ಥರೆಲ್ಲೂ ಒಟ್ಟು ಸೇರಿ ಸವಿಯಬಹುದಾದ ಫ್ಯಾಮಿಲಿ ದೋಸಾ, ಮಸಾಲಾ ದೋಸೆಯಲ್ಲಿ ವಿಶೇಷವಾದ ಎ3 ಮಸಾಲ ದೋಸೆ, ಓಪನ್ ದೋಸೆ, ಕ್ಯಾರೆಟ್ ದೋಸೆ, ಪನ್ನೀರ್ ಮಸಾಲೆ ದೋಸೆ ಸೇರಿದಂತೆ ಸುಮಾರು 30ಕ್ಕೂ ಅಧಿಕ ಬಗೆಯ ಸ್ವಚ್ಚ ಹಾಗೂ ಸ್ವಾದಿಷ್ಟಕರವಾದ ದೋಸೆಗಳು, ಇಡ್ಲಿಯಲ್ಲಿ ವಿಶೇಷವಾಗಿ ತಟ್ಟೆ ಇಡ್ಲಿ, ಚಿಲ್ಲಿ ಇಡ್ಲಿ, ಕುಟ್ಟು ಇಡ್ಲಿ, ಪೋಡಿ ಇಡ್ಲಿ, ಗೀ ಇಡ್ಲಿ ಹಾಗೂ ರವ ಇಡ್ಲಿ, ಪರೋಟದಲ್ಲಿ ಪರೋಟ, ಕೊತು ಪರೋಟ, ಚಿಲ್ಲಿ ಪರೋಟ, ಪೇಪರ್ ಪರೋಟ ಇಲ್ಲಿನ ವಿಶೇಷತೆಯಾಗಿದೆ. ಇದಲ್ಲದೆ ಚಹಾದಲ್ಲಿ ವಿವಿಧ ವೆರೈಟಿಗಳಲ್ಲಿ ಲಭ್ಯ ಇದ್ದು ರೋಸ್ ಟೀ, ಸ್ಟ್ರಾಬರಿ ಟೀ, ಚಾಕಲೇಟ್ ಟೀ, ಬನಾನ ಟೀ, ತುಳಸಿ ಟೀ, ಬ್ಲೂ ಟೀ, ಪೀಚ್ ಟೀ, ಲೆಮೆನ್ ಟೀಗಳನ್ನು ಸವಿಯಬಹುದಾಗಿದೆ. ಇದರ ಜೊತೆಗೆ ರೈಸ್ ಬಾತ್‌ಗಳು, ಚಾಟ್ಸ್‌ಗಳು ಸೇರಿದಂತೆ ಎಲ್ಲಾ ಬಗೆ ವಿವಿಧ ರುಚಿಕರವಾದ ಆಹಾರ ಪದಾರ್ಥಗಳನ್ನು ಸವಿಯಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here