ಕಾಣಿಯೂರು: ನಾಣಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೇಂದ್ರ ಸರ್ಕಾರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಇವರ ಮುತುವರ್ಜಿಯಿಂದ ಐ.ಎಫ್.ಬಿ ಇಂಡಸ್ಟ್ರೀಸ್ ಲಿಮಿಟೆಡ್ ವತಿಯಿಂದ ಮಂಜೂರುಗೊಂಡ 5ಲಕ್ಷ ರೂಪಾಯಿಯ ಚೆಕ್ ನ್ನು ಐ.ಎಫ್. ಬಿ ಸಂಸ್ಥೆಯ ಅಮಿತ್ ಘೋಷ್ ರವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಸಂತ ದಲಾರಿ, ಉಪಾಧ್ಯಕ್ಷೆ ಕುಸುಮಾವತಿ, ಶಾಲಾ ಮುಖ್ಯಶಿಕ್ಷಕ ಪದ್ಮಯ್ಯ ಗೌಡ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.