ಯಕ್ಷಗಾನ ಕಲಾವಿದ ಸಂದೇಶ್‌ದೀಪ್ ರೈ ಕಲ್ಲಂಗಳರಿಗೆ ಕನಕಶ್ರೀ ಚೇತನ ಪತಂಜಲಿ ರತ್ನ ರಾಜ್ಯ ಪ್ರಶಸ್ತಿ

0

ಪುತ್ತೂರು: ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಕರ್ನಾಟಕ ಜಾನಪದ ಕಲಾ ಕೇಂದ್ರ ಇದರ ಆಶ್ರಯದಲ್ಲಿ ಪತಂಜಲಿ ಸಂಸ್ಥೆಯ ವತಿಯಿಂದ ಶಿವಮೊಗ್ಗದ ಹೊಸ ಮನೆಯ ಪತಂಜಲಿ ಯೋಗ ಕಲಾ ಮಂದಿರದಲ್ಲಿ ನಡೆದ ಯುವಜನ ಮೇಳ ಮತ್ತು ಸಂಸ್ಥೆಯ 25 ನೇ ವರ್ಷದ ಬೆಳ್ಳಿಹಬ್ಬ ಕನಕದಾಸರ ಜಯಂತಿಯ ವಿಶೇಷ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಹಾಗೂ ಗಾಯಕರೂ ಆಗಿರುವ ಪುತ್ತೂರು ಸಂದೇಶ್ ದೀಪ್ ರೈ ಕಲ್ಲಂಗಳರವರಿಗೆ ಯಕ್ಷಗಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಕನಕಶ್ರೀ ಚೇತನ ಪತಂಜಲಿ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪತಂಜಲಿ ಸಂಸ್ಥೆಯ ಅಧ್ಯಕ್ಷ ಎ.ಹೆಚ್ ಶ್ಯಾಮಲ, ಗೌರವ ಅಧ್ಯಕ್ಷ ಎಂ.ಈಶ್ವರಪ್ಪ ನವುಲೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಿಸರ ಸಿ.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ಸಂದೇಶ್ ದೀಪ್ ಕಲ್ಲಂಗಳರವರು ಕಲ್ಲಂಗಳಗುತ್ತು ಕೊರಗಪ್ಪ ರೈ ಮತ್ತು ಲಲಿತಾ ರೈಯವರ ಪುತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here