ಪುತ್ತೂರು : ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಆಯೋಜಿಸಲಾದ ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್ ಫೆಸ್ಟ್ ಸ್ಪಿನೌಟ್ 2023ನಲ್ಲಿ ಸಂತ ಫಿಲೋಮಿನಾ ಕಾಲೇಜಿನ ಬಿಬಿಎ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುತ್ತಾರೆ. ತೃತೀಯ ಬಿಬಿಎಯ ಕೃಪಾಲಿ ರೈ ಹಾಗೂ ದ್ವಿತೀಯ ಬಿಬಿಎಯ ಭವಿಷ್ಯ ರೈ ಇವರು ಮಾರ್ಕೆಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ. ತೃತೀಯ ಬಿಬಿಎಯ ಆದಿತ್ಯ ಡೋಂಗ್ರೆ ಇವರು ಸ್ಪರ್ಧೆಯ ಬೆಸ್ಟ್ ಮ್ಯಾನೇಜರ್ ಆಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ ತಂಡವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿದೆ. ಪ್ರಶಸ್ತಿ ವಿಜೇತ ತಂಡದಲ್ಲಿ ತೃತೀಯ ಬಿಬಿಎಯ ಲೋಕೇಂದರ್ ಸಿಂಗ್ ರಾಥೋಡ್, ರಕ್ಷಿತ್ ಜೆ ಹೆಚ್, ವೈಭವ್ ರಾವ್, ಮಹಮ್ಮದ್ ತನಿಷ್, ದ್ವಿತೀಯ ಬಿಬಿಎಯ ಶ್ರೀನಿಧಿ ಕೆ, ರಶಿ ರೈ, ನಿರೀಕ್ಷಾ, ಹಾಗೂ ಪ್ರಥಮ ಬಿಬಿಎಯ ರಾಮ್ ಕಿಶೋರ್ ಭಾಗವಹಿಸಿರುತ್ತಾರೆ.
ಬಹುಮಾನ ವಿಜೇತ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ| ಆಂಟೊನಿ ಪ್ರಕಾಶ್ ಮೊಂತೆರೋ ರವರು ಅಭಿನಂದಿಸಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್‌ನ ಸಂಯೋಜಕರಾದ ಪ್ರಶಾಂತ್ ರೈ ಹಾಗೂ ಅಭಿಷೇಕ್ ಸುವರ್ಣ ಮತ್ತು ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ಡಾ ರಾಧಾಕೃಷ್ಣ ಗೌಡ ಮಾರ್ಗದರ್ಶನ ನೀಡಿರುತ್ತಾರೆ.