ಮೊಟ್ಟೆತ್ತಡ್ಕ ಹಿದಾಯತುಲ್ ಇಸ್ಲಾಂ ಮದರಸಕ್ಕೆ ಶೇ.100 ಫಲಿತಾಂಶ

0

ಅಬ್ದುಲ್ ಸಮದ್ ರೇಂಜ್ ಮಟ್ಟದಲ್ಲಿ ತೃತೀಯ

ಪುತ್ತೂರು: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ 2023ನೇ ಸಾಲಿನಲ್ಲಿ ನಡೆಸಿದ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಮೊಟ್ಟೆತ್ತಡ್ಕ ಹಿದಾಯತುಲ್ ಇಸ್ಲಾಂ ಮದರಸದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇಕಡಾ ನೂರು ಫಲಿತಾಂಶ ಪಡೆದುಕೊಂಡಿದೆ.

ಐದನೇಯ ತರಗತಿ ಪರೀಕ್ಷೆ ಬರೆದ ಹನ್ನೊಂದು ವಿದ್ಯಾರ್ಥಿಗಳಲ್ಲಿ ರೇಂಜ್ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ಅಬ್ದುಲ್ ಸಮದ್, ಮುಹಮ್ಮದ್ ಶಂಶೀರ್, ಮರಿಯಮ್ ಶಮಾ, ಇಬ್ರಹಾಇಂ ಝಿಶಾನ್, ಅಬ್ದುಲ್ ಸಮದ್, ಫಾತಿಮತ್ ಸಹ್‌ಲಾ, ಅಂಫಾ ಜಬೀನ್, ಮೊಹಮ್ಮದ್ ಫಾರೀಸ್‌ರವರು ಡಿಸ್ಟಿಂಕ್ಷನ್’ ಹಾಗೂ ನಾಲ್ಕು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ. ಏಳನೇ ತರಗತಿಯಲ್ಲಿ ಪರೀಕ್ಷೆ ಬರೆದ ಐದು ವಿದ್ಯಾರ್ಥಿಗಳಲ್ಲಿ ಒಂದು ಪ್ರಥಮ ಸ್ಥಾನ, ಒಂದು ದ್ವಿತೀಯ ಹಾಗೂ ಮೂವರು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here