ದೇವರ ಉತ್ಸವ ಸವಾರಿಗೆ ನೂತನ ಗ್ಯಾಸ್ ಲೈಟುಗಳು

0

ಪುತ್ತೂರು: ಪುತ್ತೂರು ಜಾತ್ರೆಯಲ್ಲಿ ದೇವರ ಸವಾರಿಯ ವೈಭವವೇ ಕಣ್ಣಿಗೆ ಹಬ್ಬ.ರಾತ್ರಿ ವೇಳೆಯಲ್ಲಿ ಉತ್ಸವಕ್ಕೆ ಹಿಂದೆ ಬೆಳಕಿಗಾಗಿ ಕೈ ದೀಪ ದೀವಟಿಗೆ, ಪಂಚ ದೀವಟಿಗೆ ಸಿಲಾಲು, ದಂಡು ಸಿಲಾಲುಗಳನ್ನೂ ಕ್ರಮೇಣ ಸೀಮೆ ಎಣ್ಣೆಯ ಗ್ಯಾಸ್ ಲೈಟ್‌ಗಳನ್ನು ಬಳಸಲಾಗುತ್ತಿತ್ತು. ಪೆಟ್ರೊಮ್ಯಾಕ್ಸ್ ಗ್ಯಾಸ್ ಲೈಟ್‌ಗಳ ಸಾಲು ಉತ್ಸವದ ಮೆರುಗನ್ನು ಹೆಚ್ಚಿಸಿತು.ಕನ್ನಡಿಯ ತುಂಡುಗಳ ಗೂಡಿನ ಮಧ್ಯೆ ಉರಿಯುವ ಮೆಂಟಲ್‌ನ ಪ್ರಕಾಶದೊಂದಿಗೆ ರಾಜ ಗಾಂಭೀರ್ಯದಲ್ಲಿ ಭಗವಂತ ಬೀದಿಯಲ್ಲಿ ಬರುವ ಸೊಬಗೇ ನೋಡುಗರಿಗೆ ಹಬ್ಬ.

ಇತ್ತೀಚೆಗಿನ ವರ್ಷಗಳಲ್ಲಿ ಕನ್ನಡಿ ಗೂಡಿನ ಸೀಮೆ ಎಣ್ಣೆ ಬಳಸಿ ಉರಿಸುವ ಗ್ಯಾಸ್ ಲೈಟ್ ವಿರಳವಾಗುತ್ತಿದೆ. ಅದನ್ನು ದುರಸ್ತಿಗೊಳಿಸುವವರೂ ಕಡಿಮೆಯಾಗಿದ್ದಾರೆ. ಜೊತೆಗೆ ಸೀಮೆ ಎಣ್ಣೆ ಸಿಗುವುದೂ ಕಷ್ಟ. ಈಗ ಸೀಮೆ ಎಣ್ಣೆ ರಹಿತ ಎಲ್‌ಪಿಜಿ ಯಂತಹ ಗ್ಯಾಸ್‌ನ ಲೈಟುಗಳು ಲಭ್ಯವಿದೆ. ಅದನ್ನು ಮನಗಂಡು ದೇವಳದ ಆಡಳಿತ ವರ್ಗದವರು ಈ ಮಾದರಿಯ ಲೈಟುಗಳನ್ನು ಉತ್ಸವಕ್ಕಾಗಿ ತರಿಸಿಕೊಂಡಿದ್ದಾರೆ.

ಈ ಬಾರಿಯ ಉತ್ಸವಕ್ಕೆ ಹೊಸ ಮಾದರಿಯ ಗ್ಯಾಸ್ ಲೈಟುಗಳ ಮೆರುಗು ನೀಡಲಿದೆ. ಇದರ ಜೊತೆಗೆ ಈ ಹಿಂದಿನ ಕೈ ದೀಪ, ದಂಡು ಶಿಲಾಲುಗಳು ಇರುತ್ತವೆ.

LEAVE A REPLY

Please enter your comment!
Please enter your name here