ಕೆಯ್ಯೂರು : ಕೆಪಿಎಸ್ ಕೆಯ್ಯೂರು ಶಾಲೆಯಲ್ಲಿ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಬೆಂಕಿ ಇಲ್ಲದ ಅಡುಗೆಯಿಂದ ತಾವೇ ತಯಾರಿಸಿದ ತಿಂಡಿ ತಿನಸುಗಳ ಮೆಟ್ರಿಕ್ ಮೇಳ ಕೆಪಿಎಸ್ ಶಾಲಾ ಪ್ರಾಥಮಿಕ ವಿಭಾಗ ಕೆಯ್ಯೂರಿನಲ್ಲಿ ಎ.10ರಂದು ನಡೆಯಿತು. ಕೆಪಿಎಸ್ ಪ್ರಾಥಮಿಕ ವಿಭಾಗದ ಶಾಲಾ ನಾಯಕಿ ಜನನಿ ತರಕಾರಿಯನ್ನು ಕೆಪಿಎಸ್ ಕೆಯ್ಯೂರು ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಚರಣ್ ಕುಮಾರ್ ಸಣಂಗಳರವರಿಗೆ ಹಸ್ತಾಂತರಿಸುವ ಮೂಲಕ ಮೆಟ್ರಿಕ್ ಮೇಳಕ್ಕೆ ಚಾಲನೆ ನೀಡಿದರು.
ಮೆಟ್ರಿಕ್ ಮೇಳದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಬಗೆಯ ತಿಂಡಿ, ಕೇಕ್, ಉಪ್ಪಿನಕಾಯಿ, ಚಟ್ಟಂಬಡೆ, ಎಳನೀರು ಜ್ಯೂಸ್, ವಿವಿಧ ಬಗೆಯ ಐಸ್ ಕ್ರೀಮ್, ಮನೆಯಲ್ಲಿ ಬೆಳೆದ ಸೌತೆಕಾಯಿ, ಸೋರೆಕಾಯಿ, ಬಸಳೆ, ಕುಂಬಳಕಾಯಿ, ಕಬ್ಬು, ಹರಿವೆ, ತೆಂಗಿನಕಾಯಿ, ನೆಲ್ಲಿಕಾಯಿ, ಪಪ್ಪಾಯಿ, ಕಲ್ಲಂಗಡಿ, ಚರುಮುರಿ, ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಪೋಷಕರು, ಶಿಕ್ಷಕರು ಖರೀದಿಸಿದರು.
ಈ ಸಂದರ್ಭದಲ್ಲಿ ಕೆಪಿಎಸ್ ಪ್ರಾಥಮಿಕ ವಿಭಾಗದ ಮುಖ್ಯಗುರು ಬಾಬು.ಎಂ, ಎಸ್.ಡಿ.ಎಂ.ಸಿ ಸದಸ್ಯರು, ಶಾಲಾ ಶಿಕ್ಷಕ ವೃಂದ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಭಾಗವಹಿಸಿದ್ದರು. ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಪೋಷಕರು, ಶಿಕ್ಷಕರು ಖರೀದಿಸಿದರು.