ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಶಿವಾರ್ಪಣ ವೇದಿಕೆಯಲ್ಲಿ ನಡೆಯುತ್ತಿರುವ ಐದನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವಿಂದ್ರನಾಥ ರೈ ಬಳ್ಲಮಜಲು ದೀಪಪ್ರಜ್ವಲನೆ ಮೂಲಕ ಚಾಲನೆ ನೀಡಿದರು.
ಅಶ್ವಿನಿ ಕೃಷ್ಣ ಮುಳಿಯ, ಮಾಲಾ ಕೇಶವ ಭಟ್, ಉಮಾ ಶಿವರಾಂ ಮುಳಿಯ, ಸುವರ್ಣ ಎಂ ಕೋಟೆ ಓಂಕಾರ ಮತ್ತು ಶಂಖನಾದ ಮಾಡಿದರು.
ಕುಮಾರಿ ಸುಮಾ ಎಂ ಕೋಟೆಯವರಿಂದ ಸುಗಮ ಸಂಗೀತ, ಶಿವ ಮಣಿ ಕಲಾ ಸಂಘ , ಕಲ್ಲೇಗ ಇವರಿಂದ ಸಾಂಸ್ಕೃತಿಕ ವೈವಿಧ್ಯ, ಪಡ್ನೂರಿನ ಶ್ರೀದೇವಿ ನೃತ್ಯಾರಾಧನ ಕಲಾ ಕೇಂದ್ರ ಇವರಿಂದ ಭರತನಾಟ್ಯ, ನಾಟ್ಯರಂಗ ಸಾಲ್ಮರ ಇವರಿಂದ ಭರತನಾಟ್ಯ ಹಾಗೂ ಲಲಿತಾ ಕಲಾಸದನ ವಿಟ್ಲ ಇವರಿಂದ ಭರತನಾಟ್ಯ ಜರಗಿತು. ಸಾಂಸ್ಕೃತಿಕ ಉಪ ಸಮಿತಿ ಸದಸ್ಯರಾದ ಸುರೇಶ್ ಶೆಟ್ಟಿ ಮಾಸ್ಟರ್, ಡಾ.ರಾಜೇಶ್ ಬೆಜ್ಜಂಗಳ, ಕೃಷ್ಣ ವೇಣಿ ಮುಳಿಯ, ಸುಬ್ಬಪ್ಪ ಕೈಕಂಬ, ಡಾ ಶಶಿಧರ್ ಕಜೆ ಸಹಕರಿಸಿದರು.