ಮಾಪಲ- ಮೈಕುಳಿ ಭಾಗದ ರಸ್ತೆ ಸಮಸ್ಯೆ: ಜನರಿಂದ ಚುನಾವಣಾ ಬಹಿಷ್ಕಾರ ಬ್ಯಾನರ್-ಅರುಣ್ ಕುಮಾರ್ ಪುತ್ತಿಲ ಭೇಟಿ

0

ಬಡಗನ್ನೂರು: ಮಾಪಲ- ಮೈಕುಳಿ ಭಾಗದ ಜನರು ಸುಮಾರು ಹತ್ತು ವರ್ಷಗಳಿಂದ ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದೆ ಕಷ್ಟಕರ ಪರಿಸ್ಥಿತಿಯಲ್ಲಿದ್ದುದರಿಂದ ಚುನಾವಣೆ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರವರು ಸ್ಥಳಕ್ಕೆ ಭೇಟಿ ನೀಡಿ ಈ ಭಾಗದ ಜನರ ಸಾಮಾಜಿಕ ಕಳಕಳಿಗೆ ಸ್ಪಂದಿಸಿದ್ದಾರೆ.

ಗೆಲುವಿನ ವಿಶ್ವಾಸದೊಂದಿಗೆ ಸಮಾಜದಲ್ಲಿ ವಾತಾವರಣ ಇದೆ. ಒಂದು ವೇಳೆ ಜನಪ್ರತಿನಿಽಯಾಗಿ ಆಯ್ಕೆಯಾದರೆ ಒಂದು ವರ್ಷದೊಳಗೆ ಇಲ್ಲಿ ಕಾಂಕ್ರೀಟ್ ರಸ್ತೆ ಆಗಬೇಕೆಂಬ ಯೋಚನೆ ಇದ್ದು ಅದನ್ನು ಈಡೇರಿಸುತ್ತೇನೆ ಮತ್ತು ಈ ಭಾಗದ ಮೂಲಸೌಕರ್ಯ ಒದಗಿಸುವ ಪ್ರಯತ್ನ ಸ್ಥಳೀಯ ಜನಪ್ರತಿನಿಧಿಗಳ ಜೊತೆಗೆ ಸಂಪರ್ಕ ಮಾಡಿಕೊಂಡು ಸಮಸ್ಯೆ ಬಗೆಹರಿಸುತ್ತೇನೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.

ಮತದಾನ ಅತ್ಯಂತ ಶ್ರೇಷ್ಠ ವ್ಯವಸ್ಥೆ. ಈ ಸಾಮಾಜಿಕ ಕಳಕಳಿಯಲ್ಲಿ ಮತದಾನ ಬಹಿಷ್ಕಾರ ಮಾಡುವುದು ಸರಿಯಲ್ಲ. ಯಾವ ರೀತಿ ಕೆಲಸ ಅಗಬೇಕು ಎಂಬುದನ್ನು ನಿರ್ಧರಿಸುವುದು ಮತದಾನ ವ್ಯವಸ್ಥೆ ಅದ್ದರಿಂದ ಚುನಾವಣಾ ಬಹಿಷ್ಕಾರದಿಂದ ಹಿಂದೆ ಸರಿಯಬೇಕು ಎಂದು ಮನವಿ ಮಾಡಿದ ಪುತ್ತಿಲ, ಈ ಭಾಗಕ್ಕೆ ಪೂರಕ ಅಭಿವೃದ್ಧಿಗಾಗಿ ಕೆಲಸಮಾಡುತ್ತೇನೆ. ಮುಂದೆ ಯಾವಾಗಲೂ ನಿಮ್ಮ ಮನೆಮಗನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಬಳಿಕ ಚುನಾವಣೆ ಬಹಿಷ್ಕಾರ ಬ್ಯಾನರ್ ತೆರವು ಗೊಳಿಸಲಾಯಿತು.

ಈ ಸಂದರ್ಭದಲ್ಲಿ ಭೀಮಯ್ಯ ಭಟ್, ಪುತ್ತೂರು, ಸಹಿತ ಹಲವು ಪ್ರಮುಖರು ಹಾಗೂ ಮಾಪಲ- ಮೈಕುಳಿ ಹಾಗೂ ಪೈರುಪುಣಿ ಭಾಗದ ಜನರು ಭಾಗವಹಿಸಿದ್ದರು.

ಒಂದು ವರ್ಷ ಕಾಲ ರಸ್ತೆಗೆ ನೀರು ಹಾಕುವ ಬೇಡಿಕೆ ಬಗ್ಗೆ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ನಿಮ್ಮಲ್ಲರ ಅಶಯದಂತೆ ಕಲ್ಲಿನ ಕೋರೆ ಮಾಲಕರೊಂದಿಗೆ ಈ ಕುರಿತು ಮಾತನಾಡಲು ಸಿದ್ದ. ಅದಕ್ಕೆ ಒಪ್ಪಿಕೊಳ್ಳದೆ ಅವರು ಇದೇ ಪ್ರವೃತ್ತಿ ಮುಂದುವರಿಸಿದರೆ ಇಲಾಖಾಽಕಾರಿಗಳ ಸಂಪರ್ಕ ಮಾಡಿ ನಿಮ್ಮ ಅಭಿಪ್ರಾಯಕ್ಕೆ ಪೂರಕವಾಗಿ ಶಾಶ್ವತ ನಿಲ್ಲಿಸಲು ಬದ್ದ ಎಂದು ಹೇಳಿದರು.

LEAVE A REPLY

Please enter your comment!
Please enter your name here