ಪುತ್ತೂರು: ಪುತ್ತೂರಿನ ಶಾಸಕ ಸಂಜೀವ ಮಠಂದೂರು ಅವರು ಹಲವು ಕಡೆ ಪರಿಹಾರದ ಭರವಸೆ ನೀಡಿ ಈಡೇರಿಸಿಲ್ಲ. ಮಠಂದೂರು ಅವರ ಬಗ್ಗೆ ನಮಗೆ ಗೌರವ ಇದೆ. ಆದರೆ ಪರಿಹಾರದ ಸುಳ್ಳು ಭರವಸೆ ನೀಡಿರುವುದು ಬೇಸರವಿದೆ. ಅವರ ಸುಳ್ಳು ನಡೆಗೆ ಬಿಜೆಪಿ ಪಕ್ಷಕ್ಕೆ ಸೋಲಾಗಲಿದೆ ಎಂದು ದಲಿತ್ ಸೇವಾ ಸಮಿತಿ ಜಿಲ್ಲಾ ಸ್ಥಾಪಕ ಅಧ್ಯಕ್ಷ ಶೇಷಪ್ಪ ಬೆದ್ರಕಾಡು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕನ್ಯಾನ ಗ್ರಾಮದ ಕಣಿಯೂರು ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬಕ್ಕೆ ಪರಿಹಾರದ ಭರವವಸೆ ನೀಡಿ ವಂಚಿಸಿದ್ದಾರೆ. ಆ ಕುಟುಂಬದ ಶಾಪದಿಂದ ಪುತ್ತೂರಿನಲ್ಲಿ ಬಿಜೆಪಿ ಪಕ್ಷ ಇಬ್ಬಾಗವಾಗಿದೆ. ಇವರ ಮೇಲೆ ಬಂದಿರುವ ಆರೋಪಗಳು ಇದಕ್ಕೆ ಪೂರಕವಾಗಿದೆ. ಆತ್ಮಿಕಾಳ ಕುಟುಂಬಕ್ಕೆ ಪರಿಹಾರ ಮೊತ್ತ ನೀಡಿ ತನ್ನ ಮಾತನ್ನು ಉಳಿಸಿಕೊಂಡಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ಮತ್ತು ಇದಕ್ಕೆ ಸಂಬಂಧಿಸಿ ಶ್ರಮಿಸಿದ ಮುರಳಿಕೃಷ್ಣ ಹಸಂತಡ್ಕ ಅವರಿಗೆ ಅಭಿಂದನೆಳನ್ನು ಸಲ್ಲಿಸುತ್ತೇವೆ. ಅದರೆ ಪುತ್ತೂರು ಶಾಸಕರು ಕೇವಲ ಪರಿಹಾರ ಮೊತ್ತದ ಭರವಸೆ ಮಾತ್ರ ನೀಡಿದ್ದು. ಈ ನಿಟ್ಟಿನಲ್ಲಿ ಎಸ್ಸಿಗಳು ಚುನಾವಣೆಯ ಸಂದರ್ಭದಲ್ಲಿ ತಕ್ಕುದಾದ ಉತ್ತರ ನೀಡಲಿದ್ದಾರೆ ಎಂದರು. ಮುಂದಿನ ದಿನ ಯಾವುದೇ ಪಕ್ಷ ಗೆದ್ದು ಬಂದರೂ ವಿಟ್ಲದ ಅಂಬೇಡ್ಕರ್ ಭವನಕ್ಕೆ ರೂ 2 ಕೋಟಿ ಅನುದಾನ ತರಿಸಿಏ ಸಿದ. ಈ ಕುರಿತು ಪ್ರತಿಭಟನೆ ಮುಂದುವರಿಯಲಿದೆ ಎಂದರು.