





ಪುತ್ತೂರು: ಕೆಯ್ಯೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಬೊಳಿಕ್ಕಳ ಸ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಮೋನಪ್ಪ ಮೂಲ್ಯ ಕೆ ಅಧ್ಯಕ್ಷತೆ ವಹಿಸಿದ್ದರು. ಕೆಯ್ಯೂರು ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರು ಪ್ರತಿಭಾ ಸಂಗಮ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.



ಕೆಯ್ಯೂರು ಗ್ರಾ.ಪಂ ಸದಸ್ಯೆ ಮೀನಾಕ್ಷಿ ವಿ ರೈ, ಪುತ್ತೂರು ಸಮೂಹ ಸಂಪನ್ಮೂಲ ಕೇಂದ್ರದ ಗೀತಾ ಎಸ್, ಕೆಯ್ಯೂರು ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲಾ ಎಸ್, ಕೆಯ್ಯೂರು ಪಬ್ಲಿಕ್ ಸ್ಕೂಲ್‌ನ ಮುಖ್ಯ ಶಿಕ್ಷಕ ಬಾಬು ಕೆ, ಪ್ರಗತಿಪರ ಕೃಷಿಕ ರಾಮಣ್ಣ ಗೌಡ, ಶಾಲಾ ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ ಬೊಳಿಕಳ ಮಠ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶ್ ಗೌಡ ಎಂ, ಶಾಲಾ ಶಿಕ್ಷಕಿ ಸೋಮಾವತಿ ಎ ಉಪಸ್ಥಿತರಿದ್ದರು. ಸಿಆರ್‌ಪಿ ಶಶಿಕಲಾ ಎಸ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೆಯ್ಯೂರು ಕ್ಲಸ್ಟರ್‌ನ ಎಟ್ಯಡ್ಕ ಶಾಲಾ ಶಿಕ್ಷಕಿ ಯಮುನಾವತಿಯವರು ಕೆಯ್ಯೂರು ಕ್ಲಸ್ಟರ್‌ನಲ್ಲಿ 31 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಮೇನಾಲ ಶಾಲೆಗೆ ವರ್ಗಾವಣೆಗೊಂಡಿದ್ದು ಅವರನ್ನು ಕ್ಲಸ್ಟರ್ ವತಿಯಿಂದ ಸನ್ಮಾನಿಸಲಾಯಿತು. ಪ್ರತಿಭಾ ಸಂಗಮಕ್ಕೆ ಕೆಯ್ಯೂರು ಕ್ಲಸ್ಟರ್‌ನ 12 ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲಾ ಶಾಲೆಗಳಿಗೆ ಸ್ಮರಣಿಕೆಯನ್ನು ನೀಡಲಾಯಿತು.





ಮೋನಪ್ಪ ಮೂಲ್ಯ ಕೆ ಅಧ್ಯಕ್ಷೀಯ ಮಾತುಗಳನ್ನಾಡಿದರು. ಬೊಳಿಕ್ಕಳ ಶಾಲಾ ಸಹಶಿಕ್ಷಕಿ ರೂಪ ಕುಮಾರಿ ಕೆ ಮತ್ತು ಸಹಶಿಕ್ಷಕಿ ಶೃತಿ ಕಾರ್ಯಕ್ರಮ ನಿರ್ವಹಿಸಿದರು. ಶಮಾ ಎನ್ ಜಿ ಮತ್ತು ತಂಡದವರು ಪ್ರಾರ್ಥಿಸಿದರು. ಶಾಲಾ ಮುಖ್ಯ ಶಿಕ್ಷಕಿ ಸೋಮಾವತಿ ವಂದಿಸಿದರು. ಸಂಜೆ ಸಮಾರೋಪ ಸಮಾರಂಭ ನಡೆಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮೋನಪ್ಪ ಮೂಲ್ಯ ಕೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪುತ್ತೂರು ಎಸ್‌ಬಿಆರ್‌ಪಿ ಗೀತಾ, ಹಾರಾಡಿ ಕ್ಲಸ್ಟರ್ ಸಿಆರ್‌ಪಿ ಪ್ರಸಾದ್ ಕೆ.ವಿ.ಎಲ್.ಎನ್, ಇರ್ದೆ ಉಪ್ಪಳಿಗೆ ಕ್ಲಸ್ಟರ್ ಸಿಆರ್‌ಪಿ ಶಾಲಿನಿ, ಕೆಯ್ಯೂರು ಸಿಆರ್‌ಪಿ ಶಶಿಕಲಾ ಎಸ್, ಬೊಳಿಕಳ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶ್ ಗೌಡ ಎಂ, ಕೆಯ್ಯೂರು ಪಬ್ಲಿಕ್ ಸ್ಕೂಲ್ ಮುಖ್ಯ ಶಿಕ್ಷಕ ಬಾಬು ಕೆ, ಮುಖ್ಯ ಶಿಕ್ಷಕಿ ಸೋಮಾವತಿ ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗೌರವ ಶಿಕ್ಷಕ ಪದ್ಮಯ್ಯ ಪಿ ಸ್ವಾಗತಿಸಿ ಬಹುಮಾನ ಪಟ್ಟಿ ವಾಚಿಸಿದರು. ಕೆಯ್ಯೂರು ಸಿಆರ್‌ಪಿ ಶಶಿಕಲಾ ಎಸ್ ವಂದಿಸಿದರು. ಅತಿಥಿ ಶಿಕ್ಷಕಿ ಶ್ವೇತಾ ರೈ ಯಂ ಕಾರ್ಯಕ್ರಮ ನಿರ್ವಹಿಸಿದರು.






