ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಣಚೂರು ಮಹಿಳಾ ಪದವಿ ಪೂರ್ವ ಕಾಲೇಜಿಗೆ 100% ಫಲಿತಾಂಶ

0

ವಿಟ್ಲ:ದೇರಳಕಟ್ಟೆ ಕಣಚೂರು ಮಹಿಳಾ ಪದವಿಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ಲಭಿಸಿದ್ದು, ಪರೀಕ್ಷೆಗೆ ಹಾಜರಾದ ಒಟ್ಟು 121 ವಿದ್ಯಾರ್ಥಿನಿಯರಲ್ಲಿ 35 ವಿದ್ಯಾರ್ಥಿನಿಯರು ಅತ್ಯತ್ತಮ ಶ್ರೇಣಿಯಲ್ಲಿ, 78 ವಿದ್ಯಾರ್ಥಿನಿಯರು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಷಾನ ವಿಭಾಗದಲ್ಲಿ (PCMB) 26 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಸೌಧ 570 (95 %), ಆಯೀಷತುಲ್ ನಿಹಾ 567(94.5%),ಆಸೀಯಾ ಫಾತಿಮ ಹಮ್ನಾ 565 (94.16 %) ಅಂಕಗಳನ್ನು ಗಳಿಸಿರುತ್ತಾರೆ. ವಾಣಿಜ್ಯ ವಿಭಾಗದ ಕಂಪ್ಯೂಟರ್‌ ಸೈನ್ಸ್‌ (ಗಣಕ ವಿಜ್ಞಾನ) ವಿಭಾಗದಲ್ಲಿ 8 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ನಿಹಾ ಫಾತಿಮಾ 562 (93.66 %) , ಆಯಿಷಾ ಫಾಯಿಮಾ 549 (91.5%) ಅಂಕ ಗಳಿಸಿರುತ್ತಾರೆ. ವಾಣಿಜ್ಯ ಇತಿಹಾಸ ಮತ್ತು ಕಲಾ ವಿಭಾಗದಲ್ಲಿ ಎಲ್ಲಾ ವಿದ್ಯಾರ್ಥಿನಿಯರು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಫಾತಿಮತ್ ಶೈಮಾ ಎಮ್‌. ಎಸ್‌. ‌ 557 (92.83 %) ಅಂಕಗಳನ್ನು ಗಳಿಸಿರುತ್ತಾರೆ.

LEAVE A REPLY

Please enter your comment!
Please enter your name here