ಉಪ್ಪಿನಂಗಡಿ: ಇಲ್ಲಿನ ರಥಬೀದಿ ನಿವಾಸಿ , ಹಿರಿಯ ಆರೆಸ್ಸೆಸ್ ಸ್ವಯಂಸೇವಕ ಶ್ರೀನಿವಾಸ್ ಪೈ (89) ಅಲ್ಪ ಕಾಲದ ಅನಾರೋಗ್ಯದಿಂದಾಗಿ ಶನಿವಾರ ಅವರ ಸ್ವಗೃಹದಲ್ಲಿ ನಿಧನರಾದರು.
ಉಪ್ಪಿನಂಗಡಿಯಲ್ಲಿ ಆರೆಸ್ಸೆಸ್ ಕಾರ್ಯಚಟುವಟಿಕೆಗಳಲ್ಲಿ ಮುಂಚೂಣಿ ಕಾರ್ಯಕರ್ತರಾಗಿದ್ದ ಅವರು, ರಾಜಕೀಯವಾಗಿ ಕಾಂಗ್ರೆಸ್ ಪಕ್ಷದ ಅಭಿಮಾನಿಯಾಗಿದ್ದರು. ಕೃಷಿಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿದ್ದ ಅವರು, ಒರ್ವ ಪುತ್ರ, ಒರ್ವ ಪುತ್ರಿಯನ್ನು ಅಗಲಿದ್ದಾರೆ.
ಮೃತರ ನಿವಾಸಕ್ಕೆ ಶಾಸಕ ಸಂಜೀವ ಮಟಂದೂರು, ಚುನಾವಣಾ ಸ್ಪರ್ಧಿಗಳಾದ ಆಶಾ ತಿಮ್ಮಪ್ಪ ಗೌಡ, ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಭೇಟಿ ನೀಡಿ, ಮೃತರ ಅಂತಿಮ ದರ್ಶನ ಪಡೆದರು.