ಪುತ್ತೂರು: ಅರಿಯಡ್ಕ ಗ್ರಾಮದ ಶೇಕಮಲೆ ದಲಿತ ಕಾಲನಿಗೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಭೇಟಿ ನೀಡಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಕಾಲನಿಗೆ ತೆರಳುವ ರಸ್ತೆಯಲ್ಲಿ ಹೊಳೆ ಇದ್ದು, ಅದಕ್ಕೆ ಸೇತುವೆ ಇಲ್ಲದೆ ಸಮಸ್ಯೆಯಾಗಿದೆ, ಮಳೆಗಾಲದಲ್ಲಿ ಶಾಲೆಗೆ ಮಕ್ಕಳು ತೆರಳಲೂ ಸಾಧ್ಯವಾಗುತ್ತಿಲ್ಲ.
ಸೇತುವೆ ನಿರ್ಮಾಣ ಮಾಡಿಕೊಡುವಂತೆ ಕಾಲನಿ ನಿವಾಸಿಗಳು ಮನವಿ ಮಾಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಅಶೋಕ್ ರೈ ಇಲ್ಲಿ ಇಷ್ಟೊಂದು ಅಪಾಯಕಾರಿಯಾದ ಸ್ಥಳವಿದ್ದರೂ ಶಾಸಕರಾಗಲಿ,ಸರಕಾರವಾಗಲಿ ಸ್ಪಂದಿಸದೇ ಇದ್ದದ್ದು ಅತ್ಯಂತ ಬೇಸರದ ಸಂಗತಿಯಾಗಿದೆ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ನಿಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಬದಲ್ಲಿ ಸ್ಥಳೀಯರಾದ ಸಾರ್ಥಕ್ ರೈ, ಅಶೋಕ್ ಪೂಜಾರಿ ಬೊಳ್ಳಾಡಿ,ಅರಿಯಡ್ಕ ಗ್ರಾಪಂ ಸದಸ್ಯೆ ವಿನಿತಾ,ಅಶೋಕ್ ರೈ ದೇರ್ಲ,ಮಜೀದ್ ಬಾಳಯ,ಕೂಂಜಿರ,ಕೇಶವ,ಗಣೇಶ,ಶಿವಪ್ಪ,ನಾರಾಯಣ ಎಸ್,ಲೋಕೇಶ,ಕೇಢವ,ಸತೀಶ್,ಬೂತ್ ಅಧ್ಯಕ್ಷ ಹರೀಶ್ ಬಿ ಕೆ,ಇಸುಬು ಹಾಜಿ ಬಂಡಸಾಲೆ,ಬಶೀರ್ ಕೌಡಿಚ್ಚಾರ್,ಅಶ್ರಫ್ ಸನ್ ಸೈನ್ ಸೇರಿದಂತೆ ಸ್ಥಳೀಯ ಕಾಲನಿ ನಿವಾಸಿಗಳು ಉಪಸ್ಥಿತರಿದ್ದರು. ಕಾಲನಿ ನಿವಾಸಿಗಳು ಅಶೋಕ್ ರೈ ಅವರನ್ನು ಹೂವಿನ ಹಾರ ಹಾಕಿ ಸ್ವಾಗತಿಸಿದರು. ಈ ಬಾರಿ ನಿಮಗೆ ಓಟು ಹಾಕುವುದಾಗಿ ಕಾಲನಿ ನಿವಾಸಿಗಳು ಒಕ್ಕೊರಲಿನಿಂದ ಘೋಷಿಸಿದರು.