ಅಡ್ಯನಡ್ಕ ಜಂಕ್ಷನ್ ನಲ್ಲಿ ಕೇಪು ವಲಯ ಕಾಂಗ್ರೆಸ್ ಸಮಾವೇಶ

0

ಪುತ್ತೂರಿನಲ್ಲಿ ಕಾಂಗ್ರೆಸ್ ಸಮರ್ಥ ಅಭ್ಯರ್ಥಿ ಯನ್ನು ಕಣಕ್ಕಿಳಿಸಿದೆ: ಎಕೆಎಂ ಅಶ್ರಫ್

ಮಾತಿನ ಮೋಡಿಯಿಂದ ಜನರನ್ನು ಮೂರ್ಖರನ್ನಾಗಿಸುವ ಕೆಲಸ ಬಿಜೆಪಿಯವರಿಂದ ಆಗುತ್ತಿದೆ: ಡಾ.ರಾಜಾರಾಮ್ ಕೆ.ಬಿ

ಬಿಜೆಪಿಯ ಲಂಚ ಮಂಚದಾಟಕ್ಕೆ ಜನರು ರೋಸಿಹೋಗಿದ್ದಾರೆ: ಎಂ.ಎಸ್.ಮಹಮ್ಮದ್

ಬಿಜೆಪಿಯವರ ಕುತಂತ್ರ ಈ ಬಾರಿ ನಡೆಯಲ್ಲ: ಹೇಮನಾಥ ಶಟ್ಟಿ ಕಾವು

ವಿಟ್ಲ: ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸಮರ್ಥ ಅಭ್ಯರ್ಥಿ ಯನ್ನು ಕಣಕ್ಕಿಳಿಸಿದೆ. ನಾವೆಲ್ಲರು ಒಂದೇ ಮನಸ್ಸಿನಿಂದ ಅವರ ಪರವಾಗಿ ಕೆಲಸ ಮಾಡಿ ಅವರನ್ನು ಗೆಲ್ಲಿಸುವ ಬಹುದೊಡ್ಡ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಕೆಎಂ ಅಶ್ರಫ್ ರವರು ಹೇಳಿದರು.

ಅವರು ಅಡ್ಯನಡ್ಕ ಜಂಕ್ಷನ್ ನಲ್ಲಿ ನಡೆದ ಮಕೇಪು ವಲಯ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ಅಶೋಕ್ ಕುಮಾರ್ ರೈರವರ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ವಂದಿಸುವ ಗುಣ ನನಗೆ ಬಹಳ ಇಷ್ಟವಾಗಿದೆ. ಆ ನಿಟ್ಟಿನಲ್ಲಿ ನಾನು ಅವರ ಪರವಾಗಿ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಶಾಸಕನಾಗಲು ಅರ್ಹ ವ್ಯಕ್ತಿ ಅವರಾಗಿದ್ದು, ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರದ ಆಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಪುತ್ತೂರಿನಲ್ಲಿ ಮತ್ತೆ ಕಾಂಗ್ರೆಸ್ ಪತಾಕೆ ಹಾರಿಸಲು ನೀವೆಲ್ಲರು ಅವಕಾಶ ಮಾಡಿಕೊಡಬೇಕು ಎಂದರು.


ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ.ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಬಿಜೆಪಿಯವರು ಸ್ವಿಸ್ ಬ್ಯಾಂಕ್ ನಿಂದ ಕಪ್ಪುಹಣ ತಂದು ಜನರಿಗೆ 15 ಲಕ್ಷ ರೂಪಾಯಿ ಹಂಚುತ್ತೇನೆ ಎಂದ ಅವರು 40% ಭ್ರಷ್ಟಾಚಾರ ಮಾಡಿ ರಾಜ್ಯದಲ್ಲಿ ಕೊಳ್ಳೆಹೊಡೆದಿದ್ದಾರೆ. ಕೇವಲ ಮಾತಿನ ಮೋಡಿಯಿಂದ ಜನರನ್ನು ಮೂರ್ಖರನ್ನಾಗಿಸುವ ಕೆಲಸ ಬಿಜೆಪಿಯವರಿಂದ ಆಗುತ್ತಿದೆ. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂಧಿಸುವ ಕಾಂಗ್ರೆಸ್ ಸರಕಾರವನ್ನು ಗೆಲ್ಲಿಸಲು ಎಲ್ಲರ ಸಹಕಾರ ಅಗತ್ಯ ಎಂದರು.

ಕೆಪಿಸಿಸಿ ಕಾರ್ಯದರ್ಶಿಯಾದ ಎಂ ಎಸ್ ಮುಹಮ್ಮದ್ ರವರು ಮಾತನಾಡಿ ಬಿಜೆಪಿಯ ಲಂಚ ಮಂಚದಾಟಕ್ಕೆ ಜನರು ರೋಸಿಹೋಗಿದ್ದಾರೆ, ಈ ಬಾರಿ ಜನರು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದರು.

ಕಾಂಗ್ರೆಸ್ ನಾಯಕ ಹೇಮನಾಥ್ ಶೆಟ್ಟಿ ಕಾವುರವರು ಮಾತನಾಡಿ ಬಿಜೆಪಿಯವರ ಕುತಂತ್ರ ಈ ಬಾರಿ ನಡೆಯಲ್ಲ, ಜನರು ಈ ಬಾರಿ ಭ್ರಷ್ಟರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಪುತ್ತೂರಿನಲ್ಲಿ ಈ ಬಾರಿ ಕಾಂಗ್ರೆಸ್ ನ ಅಭ್ಯರ್ಥಿ ವಿಜಯಿಯಾಗೋದು ಖಚಿತ ಎಂದರು.

ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಸದಸ್ಯರುಗಳಾದ ಉಮಾನಾಥ ಶೆಟ್ಟಿ ಪೆರ್ನೆ, ಪ್ರವೀಣ್ ಚಂದ್ರ ಆಳ್ವ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಉಸ್ತುವಾರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಪುತ್ತೂರು ಬ್ಲಾಕ್ ಉಸ್ತುವಾರಿ ಮುರಳೀಧರ ರೈ ಮಠಂದಬೆಟ್ಟು, ಏಣ್ಮಕಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಆಯಿಷಾ, ಎಣ್ಮಕಜೆ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಯಶ್ರೀ ಕುಲಾಲ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಯುನಿಕ್ ರಹಮಾನ್, ಜಿಲ್ಲಾ ಪ್ರಚಾರ ಸಮಿತಿ ಜಂಟಿ ಸಂಯೋಜಕರಾದ ವಿ. ಕೆ. ಎಂ. ಅಶ್ರಫ್, ಎನ್ ಎಸ್ ಯು ಐ ರಾಜ್ಯ ಉಪಾಧ್ಯಕ್ಷರಾದ ಫಾರೂಕ್ ಬಯಬೆ, ಪಕ್ಷದ ಪ್ರಮುಖರಾದ ವೇದನಾಥ್ ಸುವರ್ಣ, ಮಹೇಶ್ ಅಂಕೊತ್ತಿಮಾರ್,ಕೆ ಪಿ ಮೊಹಮ್ಮದ್, ರಶೀದ್ ಹೊನೆಸ್ಟ್, ಮೊಹಮ್ಮದ್ ಕೆ ಮೊದಲಾದವರು ಉಪಸ್ಥಿತರಿದ್ದರು,
ಕೇಪು ವಲಯ ಅಧ್ಯಕ್ಷ ರಾದ ಬಾಲಕೃಷ್ಣ ಶೆಟ್ಟಿ ಬೆಂಗ್ರೂಡಿಯವರು ಸ್ವಾಗತಿಸಿದರು, ವಿಟ್ಲ-ಉಪ್ಲಿನಂಗಡಿ ಬ್ಲಾಕ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷರಾದ ಕರೀಂ ಕುದ್ದುಪದವು ರವರು ವಂದಿಸಿದರು.

ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ – ಭ್ರಷ್ಟಾಚಾರಿಗಳಿಗೆ ಈ ಬಾರಿ ಜನರೇ ಬುದ್ದಿ ಕಲಿಸಲಿದ್ದಾರೆ
ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಅಶೋಕ್ ಕುಮಾರ್ ರೈರವರು ಮಾತನಾಡಿ ಉಳುವವನೆ ಹೊಲದೊಡೆಯನನ್ನಾಗಿ ಮಾಡಿದ ಸಾಧನೆ ಕಾಂಗ್ರೆಸ್ ಪಕ್ಷದ್ದಾಗಿದೆ. ಈ ಯೋಜನೆ ಹಲವು ಬಡವರ ಬದುಕಿಗೆ ಬೆಳಕಾಗಿದೆ. ಹೋದೆಲ್ಲೆಡೆ ನನಗೆ ಸಿಗುತ್ತಿರುವ ಜನಬೆಂಬಲವನ್ನು ಕಂಡು ಸಹಿಸದ ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಜನ ಯಾವುದೇ ಅಪಪ್ರಚಾರಗಳಿಗೆ ಕಿವಿಕೊಡಬಾರದು. ನಾನು ನನ್ನ ಹೇಳಿಕೆಗಳಿಗೆ ಬದ್ಧನಾಗಿದ್ದೇನೆ. ಭ್ರಷ್ಟಾಚಾರಿಗಳಿಗೆ ಈ ಬಾರಿ ಜನರೇ ಬುದ್ದಿ ಕಲಿಸಲಿದ್ದಾರೆ ಎಂದರು.

LEAVE A REPLY

Please enter your comment!
Please enter your name here