





ಪುತ್ತೂರು: ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ & ಮ್ಯಾನೇಜ್‌ಮೆಂಟ್, ಲಯನ್ಸ್ ಕ್ಲಬ್ ಇಂಟರ್‌ನ್ಯಾಶನಲ್, ರೀಜನ್ X1 ಝೋನ್ I ಸಹಯೋಗದೊಂದಿಗೆ ಬಲ್ಮಠದ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ & ಮ್ಯಾನೇಜ್ಮೆಂಟ್ (YIASCM) ಕ್ಯಾಂಪಸ್‌ನಲ್ಲಿ ಎ.28ರಂದು ಬೆಳಿಗ್ಗೆ 9ರಿಂದ ಸಂಜೆ 4 ರವರೆಗೆ ಯೆನ್ ಜಾಬ್ ಫೇರ್-2023 ಆಯೋಜಿಸುತ್ತಿದೆ.


35 ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿದ್ದು ಯುವ ಪ್ರತಿಭಾವಂತ ಮಾನವ ಸಂಪನ್ಮೂಲಗಳಿಗೆ ಪ್ರವಾಸೋದ್ಯಮ, ಆತಿಥ್ಯ, ವಿಮಾನಯಾನ, ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ, ಆಸ್ಪತ್ರೆಗಳು, ಲಾಜಿಸ್ಟಿಕ್ಸ್, ಬ್ಯಾಂಕಿಂಗ್ ಸೇರಿದಂತೆ ಮಾಧ್ಯಮ, ನರ್ಸಿಂಗ್, ಆಟೋಮೊಬೈಲ್, ಶಿಕ್ಷಣ ಸಂಸ್ಥೆಗಳು ಮತ್ತು ಐಟಿ, ಐಟಿ ಅಲ್ಲದ ಕಂಪನಿಗಳಲ್ಲಿ, ನರ್ಸಿಂಗ್ ಮತ್ತು ಆಟೋಮೊಬೈಲ್ಸ್ ಅಂತರರಾಷ್ಟ್ರೀಯ ಉದ್ಯೋಗಾವಕಾಶ ಉತ್ತಮ ಅವಕಾಶಗಳನ್ನು ಕಂಡುಕೊಳ್ಳಲು ಒಂದು ವೇದಿಕೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.














