ಪುತ್ತೂರು ಉಮೇಶ್ ನಾಯಕ್ ನೇತೃತ್ವದಲ್ಲಿ ಅನಾಥ ವೃದ್ದೆಯ ರಕ್ಷಣೆ

0

ಪುನರ್ವಸತಿ, ಶಿಶು ಅಭಿವೃದ್ಧಿ ಇಲಾಖೆ, ಮಹಿಳಾ ಪೊಲೀಸ್ ಠಾಣೆ,ದೇವಸ್ಥಾನ ಸಮಿತಿ ಸಹಕಾರ

ಪುತ್ತೂರು:ಕಳೆದ ಹಲವು ವರ್ಷಗಳಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಉಳಿದುಕೊಂಡಿದ್ದ ಸುಮಾರು 65 ವರ್ಷ ವಯೋಮಾನದ ನೀಲು ಎಂಬ ಅನಾಥ ಮಹಿಳೆ ಯನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಶಿಶು ಅಭಿವೃದ್ಧಿ ಇಲಾಖೆ, ಮಹಿಳಾ ಪೊಲೀಸ್ ಠಾಣೆ ಹಾಗೂ ಮಹಾಲಿಂಗೇಶ್ವರ ದೇವಸ್ಥಾನ ಸಮಿತಿಯ ಸಹಕಾರದೊಂದಿಗೆ ರಕ್ಷಣೆ ಮಾಡಿ ಜಿಡೆಕಲ್ಲಿನಲ್ಲಿರುವ ಬೆಂಗಳೂರಿನ ದೀಪಶ್ರೀ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಶ್ರೀಧರ್ ಅವರ ‘ದೀಪಶ್ರೀ’ ವೃದ್ಧರ ಹಾಗೂ ಹಿರಿಯ ನಾಗರಿಕರ ಪುನರ್ವಸತಿ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ.


ಘಟನೆಯ ಹಿನ್ನೆಲೆ:
ಕೆಲ ಸಮಯಗಳಿಂದ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಉಳಿದುಕೊಂಡಿದ್ದ ನೀಲು ಎಂಬವರು ದೇವಸ್ಥಾನದ ಪರಿಸರವನ್ನು ಹಾಳು ಮಾಡುತ್ತಿದ್ದರು ಎಂದ ದೂರು ಬಂದಿತ್ತು.ಈ ವಿಚಾರವಾಗಿ ವೃದ್ದೆಗೆ ಹಲ್ಲೆ ನಡೆಸಿದ್ದ ಆರೋಪದ ಮೇರೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.ಈಕೆಗೆ ಪುನರ್ವಸತಿ ಕಲ್ಪಿಸುವ ಕುರಿತು ನ್ಯಾಯಾಲಯದಿಂದ ಸೂಚನೆ ಬಂದ ಮೇರೆಗೆ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಮಂಜುಳಾ ಎಂಬವರು ಈ ವಿಷಯವನ್ನು ಪುತ್ತೂರು ಉಮೇಶ್ ನಾಯಕ್ ಅವರಿಗೆ ತಿಳಿಸಿದ್ದರು.ಈ ಹಿನ್ನೆಲೆಯಲ್ಲಿ ಪುನರ್ವಸತಿಗೆ ಕ್ರಮ ಕೈಗೊಳ್ಳಲಾಗಿದೆ.


ಮನವರಿಕೆಯ ಬಳಿಕ ಪುನರ್ವಸತಿ ಕೇಂದ್ರಕ್ಕೆ:
ನೀಲು ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯುವ ಮೊದಲು ಅವರಿಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸಮಿತಿಯ ಸದಸ್ಯರಾದ ಸುಭಾಸ್ ರೈ, ವಿನಯ್ ಸುವರ್ಣ, ಹಿಂದೂ ಜಾಗರಣ ವೇದಿಕೆಯ ದಿನೇಶ್ ಪಂಜಿಗ, ಸ್ಥಳೀಯರಾದ ಮನೋಹರ್ ಅವರು ಮನವರಿಕೆ ಮಾಡಿದರು.ತನ್ನ ಜೊತೆ ವಾಸವಾಗಿರುವ ‘ಜೂಲಿ’ ಎಂಬ ಹೆಣ್ಣು ನಾಯಿಯನ್ನು ಕೂಡ ತನ್ನ ಜೊತೆಗೆ ಕರೆದುಕೊಂಡು ಹೋಗಬೇಕೆಂದು ನೀಲುರವರು ಪಟ್ಟು ಹಿಡಿದಿದ್ದರು.ಆದರೆ ನಾಯಿ ಈಕೆಯ ಜೊತೆ ಬರದೇ ಇದ್ದುದರಿಂದ ನೀಲು ಅವರನ್ನು ಮಾತ್ರವೇ ದೀಪಶ್ರೀ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಯಿತು.


ಪಚ್ಚನಾಡಿಯಿಂದ ಬಂದಿದ್ದರು:
ಎರಡು ವರ್ಷದ ಹಿಂದೆ ಈಕೆಯನ್ನು ಸಮಾಜ ಕಲ್ಯಾಣ ಇಲಾಖೆಯ ಯೋಜನ ನಿರ್ದೇಶಕಿ ಗಾಯತ್ರಿ ಸುವರ್ಣ ಅವರ ನೇತೃತ್ವದಲ್ಲಿ ಉಮೇಶ್ ನಾಯಕ್ ಇವರು ಮಂಗಳೂರಿನ ಪಚ್ಚನಾಡಿಯಲ್ಲಿರುವ ನಿರ್ಗತಿಕರ ಪುನರ್ವಸತಿ ಕೇಂದ್ರಕ್ಕೆ ರವಾನಿಸಿದ್ದರು.ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಅಥವಾ ಪಚ್ಚನಾಡಿ ನಿರ್ಗತಿಕರ ಪುನರ್ವಸತಿ ಕೇಂದ್ರದಿಂದ ಅವರೇ ಕಳುಹಿಸಿದ್ದರೋ ಎಂಬ ನಿಖರ ಮಾಹಿತಿ ಇಲ್ಲ.ಆದರೆ ಪುತ್ತೂರಿಗೆ ಮರಳಿದ್ದರು.

ಒಟ್ಟು ಇದೀಗ ವೃದ್ದೆಯನ್ನು ಕರೆದೊಯ್ಯಲು ಮಹಿಳಾ ಪೊಲೀಸ್ ಠಾಣೆಯ ಎಸ್‌ಐ ಸುನಿಲ್ ಕುಮಾರ್ ಅವರ ನಿರ್ದೇಶನದಂತೆ ಇಲಾಖೆ ಸಿಬ್ಬಂದಿಗಳಾದ ಮಂಜುಳಾ ಹಾಗೂ ಗಣೇಶ್, ಶಿಶು ಅಭಿವೃದ್ಧಿ ಇಲಾಖೆ ಪುತ್ತೂರು ಇದರ ಯೋಜನಾ ನಿರ್ದೇಶಕರಾದ ಹರೀಶ್ ಅವರ ಸೂಚನೆಯಂತೆ ಮಂಗಳೂರಿನಿಂದ ಪುನರ್ವಸತಿ ಕಾರ್ಯಕರ್ತರಾದ ಕೌನ್ಸಿಲರ್ ರಶ್ಮಿ ಹಾಗೂ ಕೋರ್ಡಿನೇಟರ್ ಮಹಿಮಾ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರ ಸೂಚನೆಯ ಮೇರೆಗೆ ಸಮಿತಿಯ ಸದಸ್ಯರಾದ ಸುಭಾಷ್ ರೈ ಹಾಗೂ ವಿನಯ್ ಸುವರ್ಣ, ಸಿಬ್ಬಂದಿಗಳಾದ ಪದ್ಮನಾಭ, ರೋಟರಿ ಕ್ಲಬ್ಬಿನ ಮಾಜಿ ಅಧ್ಯಕ್ಷ ವೆಂಕಟರಮಣ ಕಳುವಾಜೆ, ಬಿಎಂಎಸ್ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಹಾಗೂ ಆಟೋ ಚಾಲಕ ವಿನಯ್ ಇನ್ನಿತರರು ಸಹಕರಿಸಿದರು.

LEAVE A REPLY

Please enter your comment!
Please enter your name here