





ಪುತ್ತೂರು: ಆರ್‌ಬಿಐ ಮಾಜಿ ನಿರ್ದೇಶಕ ಹಾಗೂ ಕೆಪಿಸಿಸಿ ನಿಕಟಪೂರ್ವ ಪ್ರಧಾನ ಕಾರ್‍ಯದರ್ಶಿ ಅಗರಿ ನವೀನ್ ಭಂಡಾರಿ ಮತ್ತು ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ, ಹರಿಯಾಣ ರಾಜ್ಯದ ಶಾಸಕ ನೀರಜ್ ಶರ್ಮರವರು ಎ. 26 ರಂದು ಸರ್ವೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಇವರನ್ನು ದೇವಾಲಯದ ವತಿಯಿಂದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತುರವರು ಗೌರವಿಸಿದರು. ದೇವಾಲಯದ ಅರ್ಚಕ ಶ್ರೀರಾಮ್ ಕಲ್ಲೂರಾಯರವರು ಉಪಸ್ಥಿತರಿದ್ದರು.
















