ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಮಾ.8ರಿಂದ ಮಾ.13 ರವರೆಗೆ ಅಷ್ಠಬಂಧ ಬ್ರಹ್ಮಕಲಶೋತ್ಸವ ನಡೆದು ಕ್ಷೇತ್ರದಲ್ಲಿ ದೇವರಿಗೆ ದೃಢಕಲಶಾಭಿಷೇಕವು ಎ.29 ನೆರವೇರಿತು.
ಮಾ. 28ರಂದು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಾಸ್ತು ಹೋಮ, ರಾಕ್ಷೋಘ್ನ ಹೋಮ, ಎ.29 ರಂದು ಬೆಳಿಗ್ಗೆ ಮಹಾಗಣಪತಿ ಹೋಮ , ಮಧ್ಯಾಹ್ನ ದೃಢಕಲಶಾಭಿಷೇಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಬ್ರಹ್ಮಕಲಶೋತ್ಸವ ಸಮಿತಿಯ ಲೆಕ್ಕ ಪತ್ರ ಮಂಡನೆ:
ಕ್ಷೇತ್ರದಲ್ಲಿ 6 ದಿನಗಳ ಕಾಲ ನಡೆದ ಜೀರ್ಣೋದ್ಧಾರ, ಬ್ರಹ್ಮಕಲಶದ ಲೆಕ್ಕ ಪತ್ರ ಮಂಡನಾ ಸಭೆಯು ಇದೇ ಸಂದರ್ಭದಲ್ಲಿ ನಡೆಯಿತು. ಸಭೆಯಲ್ಲಿ ಕ್ಷೇತ್ರದ ತಂತ್ರಿಗಳಾದ ವರ್ಕಾಡಿ ಗಣೇಶ ತಂತ್ರಿಗಳು ಮಾತನಾಡಿ, ತಾಯಿ ಮಹಿಷಮರ್ದಿನಿ ದೇವಿಯ ಬ್ರಹ್ಮಕಲಶ ಯಶಸ್ವಿಯಾಗಿ ನಡೆದಿದೆ ದೇವಿಯ ಶಕ್ತಿ ಅಭೂತವಾದುದು ಪ್ರತಿ 12 ವರ್ಷಕ್ಕೊಮ್ಮೆ ಬ್ರಹ್ಮಕಲಶ ನಡೆಯುವುರಿಂದ ಕ್ಷೇತ್ರದಲ್ಲಿ ಹೊಸ ಚೈತನ್ಯ ವೃದ್ಧಿಯಾಗುತ್ತದೆ ಕ್ಷೇತ್ರ ವೃದ್ಧಿಯಾದರೆ ಇಡೀ ಗ್ರಾಮವೇ ವೃದ್ದಿಯಾಗುತ್ತದೆ. ಪ್ರತಿ ಮನೆಯಿಂದಲೂ ಆದಷ್ಟು ಮಂದಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುವುದರ ಮೂಲಕ ಪ್ರತಿ ಮನೆಯಲ್ಲೂ ನೆಮ್ಮದಿ ಪ್ರಾಪ್ತಿಯಾಗಲಿ ಬ್ರಹ್ಮಕಲಶೋತ್ಸವದ ಯಶಸ್ವಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ದೇವಿಯ ಅನುಗ್ರಹ ಸದಾ ಇರಲಿ ಎಂದು ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಅಧ್ಯಕ್ಷ ಎಸ್. ಅರ್. ರಂಗಮೂರ್ತಿ ಮಾತನಾಡಿ, ಎಲ್ಲರ ಪರಿಶ್ರಮದಿಂದ ಬ್ರಹ್ಮಕಲಶ ಬಹಳಷ್ಟು ಯಶಸ್ವಿಯಾಗಿ ನಡೆದಿದೆ. ಬ್ರಹ್ಮಕಲಶೋತ್ಸವ ಸಮಿತಿ, ಆಡಳಿತ ಸಮಿತಿ, ಭಜನಾ ಮಂಡಳಿಯ ಹಾಗೂ ಊರ, ಪರವೂರ ಭಕ್ತಾದಿಗಳ ಪೂರ್ಣ ಸಹಕಾರ, ಶಕ್ತಿಮೀರಿ ಸೇವೆ ಸಲ್ಲಿಸಿದ ಕಾರ್ಯಕರ್ತರ ಶ್ರಮದಾನದಿಂದ ಅಭೂತಪೂರ್ಣ ಬ್ರಹ್ಮಕಲಶ ನಡೆದಿರುವುದು ಸಂತಸ ತಂದಿದೆ. ಬ್ರಹ್ಮಕಲಶದ ಯಶಸ್ವಿಗೆ ಸಹಕರಿಸಿದ ಪ್ರತಿ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ವಿಟ್ಲ ಅರಮನೆಯ ಕೃಷ್ಣಯ್ಯ ಬಲ್ಲಾಲ್ ಸಂದೋರ್ಭಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಉದಯ ಕುಮಾರ್ ದಂಬೆ ಲೆಕ್ಕ ಪತ್ರ ಮಂಡಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯ, ಆಡಳಿತ ಸಮಿತಿಯ ಉಪಾಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಪ್ರಧಾನ ಕಾರ್ಯದರ್ಶಿ ಶ್ರೀಧರ ಶೆಟ್ಟಿ ದೇವರಗುಂಡಿ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಶಂಕರನಾರಾಯಣ ಭಟ್ ಮಲ್ಯ, ಕಾರ್ಯದರ್ಶಿ ಬಿ. ಕೆ. ರವಿ ದಲ್ಕಜೆಗುತ್ತು, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವಾರ್ಪಣೆ:
ಕ್ಷೇತ್ರದ ತಂತ್ರಿ ವರ್ಕಾಡಿ ಗಣೇಶ ತಂತ್ರಿವರನ್ನು ಪವಿತ್ರಪಾಣಿ ವಾಸುದೇವ ಶಿವತ್ತಾಯ, ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯರನ್ನು ಶಂಕರನಾರಾಯಣ ಭಟ್ ಮಲ್ಯ, ಕೃಷ್ಣಯ್ಯ ಬಲ್ಲಾಲ್ ರನ್ನು ಎಸ್. ಅರ್. ರಂಗಮೂರ್ತಿ ಫಲಪುಷ್ಪ , ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸುಮಿತ್ರಾ ಗರಡಿ ಪ್ರಾರ್ಥಿಸಿದರು. ರಾಮಕೃಷ್ಣ ಬಿ. ನಿರೂಪಿಸಿ, ಆಡಳಿತ ಸಮಿತಿ ಸದಸ್ಯ ಹರ್ಷ ಎ ಎಸ್ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಧರ ಶೆಟ್ಟಿ ದೇವರಗುಂಡಿ ವಂದಿಸಿದರು. ಶಾಂತಿ ಮಂತ್ರದೊಂದಿಗೆ ಸಂಪನ್ನಗೊಂಡಿತು.