ಪುತ್ತೂರು: ಈರ್ ಎಂಕ್ಲೆಗ್ ಸಹಾಯ ಮಲ್ತರ್ ಎಂಕ್ಲೆನ ವೋಟು ಇರೆಗೇ…. ( ನೀವು ನಮಗೆ ಸಹಾಯ ಮಾಡಿದ್ದೀರಿ ನಮ್ಮ ವೋಟು ನಿಮಗೆ) ಇದು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಯವರು ಸಾರ್ವಜನಿಕ ಚುನಾವಣಾ ಪ್ರಚಾರ ಸಭೆ ಮುಗಿಸಿ ವೇದಿಕೆಯಿಂದ ಇಳಿಯುತ್ತಿದ್ದಂತೆಯೇ ಹಲವಾರು ಮಹಿಳೆಯರು ಬಂದು ಅಭ್ಯರ್ಥಿ ಅಶೋಕ್ ರೈಯವರನ್ನು ಮಾತನಾಡಿಸಿ ಆಶೀರ್ವಾದ ಮಾಡುತ್ತಿದ್ದಾರೆ.
ಕಳೆದ 12 ವರ್ಷಗಳಿಂದ ತನ್ನ ಟ್ರಸ್ಟಿ ಮೂಲಕ ಸಾವಿರಾರು ಬಡ ಕುಟುಂಬಗಳಿಗೆ ಅಶೋಕ್ ರೈ ವಿವಿಧ ಸಹಾಯವನ್ನು ಮಾಡಿದ್ದರು. ಇವರಿಂದ ಸಹಾಯ ಪಡೆದ ಕುಟುಂಬದ ಮಹಿಳೆಯರು ಚುನಾವಣೆಗೆ ಸ್ಪರ್ಧಿಸುತ್ತಿರುವ ಅಶೋಕ್ ರೈ ಬರುತ್ತಾರೆ ಎಂದು ವಿಷಯ ತಿಳಿದು ಸಭೆಗೆ ತಂಡೋಪ ತಂಡವಾಗಿ ಬರುತ್ತಿದ್ದಾರೆ. ರೈಯವರ ಭಾಷಣವನ್ನು ಆಲಿಸಿದ ಬಳಿಕ ಅವರನ್ನು ಮುಖತ; ಭೇಟಿಯಾಗಿ ಅಂದು ನೀವು ನಮಗೆ ಸಹಾಯ ಮಾಡಿದ್ದೀರಿ ಅದನ್ನು ನಾವು ಮರೆತಿಲ್ಲ. ನಿಮಗೆ ನಾವು ವೋಟು ಹಾಕುತ್ತೇವೆ. ನೀವುನ ಗೆಲ್ಲಬೇಕು ಇನ್ನಷ್ಟು ಬಡವರಿಗೆ ನೆರವು ನೀಡಬೇಕು ಎಂದು ಆಶೀರ್ವಾದ ಮಾಡುತ್ತಿದ್ದಾರೆ. ಈ ದೃಶ್ಯಗಳು ಸಾಮಾನ್ಯವಾಗಿ ಪ್ರಚಾರಕ್ಕೆ ಹೋದಲ್ಲೆಲ್ಲಾ ಕಂಡು ಬರುತ್ತಿದ್ದು ಮಹಿಳೆಯರ ಮಾತು ಕೇಳಿ ಅಶೋಕ್ ರೈಯವರು ಭಾವುಕರಾದ ಪ್ರಸಂಗಗಳು ನಡೆದಿದೆ. ಈ ಬಗ್ಗೆ ಅಶೋಕ್ ರೈಯವರಲ್ಲಿ ಕೇಳಿದರೆ ಬಡವರಿಗೆ ಸಹಾಯ ಮಾಡಿದರೆ ಅವರು ಅದನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂಬುದಕ್ಕೆ ಇದುವೇ ಸಾಕ್ಷಿ. ನಾನು ಮಾಡಿದ ಸಹಾಯ ನನಗೆ ಆಶೀರ್ವಾದ ರೂಪದಲ್ಲಿ ಬರುತ್ತಿರುವುದು ಸಂತೋಷ ಉಂಟು ಮಾಡಿದೆ ಮತ್ತು ಮನಸ್ಸಿಗೆ ನೆಮ್ಮದಿಯನ್ನು ತಂದಿದೆ. ನಾನು ಬಡವರಿಗೆ ಸಹಾಯ ಮಾಡುವಾಗ ಕೆಲವರು ನನ್ನನ್ನು ಮೂದಲಿಸಿದ್ದರು. ಯಾಕೆ ಅಶೋಕ್ ರೇ ನೀವು ಹೆಲ್ಪ್ ಮಾಡ್ಲಿಕ್ಕೆ ಹೋಗುತ್ತೀರಿ, ಹಾಗೇ ಹೀಗೆ ಎಂದು ನನ್ನನ್ನು ಪ್ರಶ್ನಿಸಿದ್ದರು ಆವಾಗ ನಾನು ಎಲ್ಲರಲ್ಲೂ ಹೇಳಿದ್ದೆ“ ನಾನು ಸಹಾಯ ಮಾಡಿದ್ದು ಬಡವರಿಗೆ ಅದು ಅವರಿಗೆ ಖಂಡಿತವಾಗಿಯೂ ನೆನಪಿನಲ್ಲಿ ಇರುತ್ತದೆ ಎಂದು ಈ ಮಾತು ಅಕ್ಷರಶ; ಇಂದು ಸತ್ಯವಾಗುತ್ತಿದೆ.