ಮೇ.3: ದಿಲ್ ಫರ್ ಪೆಟ್ ಶಾಪ್ ಕೊಯಿಲದಲ್ಲಿ ಶುಭಾರಂಭ

0

ಪುತ್ತೂರು : ಕಳೆದ 6 ವರುಷಗಳಿಂದ ಕಡಬ ತಾಲೂಕಿನ ಕೊಯಿಲದಲ್ಲಿ ಕಾರ್ಯಾಚರಿಸುತ್ತಿದ್ದ ಅಬ್ದುಲ್ ಫಾರೂಕ್ ಮಾಲೀಕತ್ವದ ಔಷಧಿ ಮಳಿಗೆ, ದಿಲ್ ಫರ್ ಮೆಡಿಕಲ್ಸ್ ಏಳನೇ ವರುಷಕ್ಕೆ ಪಾದರ್ಪಣೆಗೈಯುತ್ತಿರುವ ಸಂದರ್ಭದಲ್ಲಿ ತನ್ನ ಗ್ರಾಹಕ ಜನತೆಗೆ ಇನ್ನೂ ಹೆಚ್ಚಿನ ಸೇವೆ ಒದಗಿಸುವ ಸಲುವಾಗಿ ಹಾಗೂ ವಾರ್ಷಿಕೋತ್ಸವದ ಖುಷಿ, ಸಂಭ್ರಮವನ್ನು ಇನ್ನೊಂದು ಸಂಸ್ಥೆ ಆರಂಭಿಸುವ ಮೂಲಕ ಕೊಯಿಲ ಜನತೆಗೆ ಕೊಡುಗೆ ನೀಡಿದೆ.

ಇದೀಗ ಕಾರ್ಯಾಚರಿಸುತ್ತಿರುವ ಔಷಧಿ ಮಳಿಗೆಯನ್ನೇ ವಿಸ್ತರಿಸಿ ನವೀಕೃತಗೊಳಿಸಿ ಪಕ್ಕದಲ್ಲೇ ದಿಲ್ ಫರ್ ಪೆಟ್ ಶಾಪ್ ಮೇ.3 ರಂದು ಶುಭಾರಂಭಗೊಳ್ಳಲಿದೆ.
ಮಳಿಗೆಯಲ್ಲಿ ಅಲೋಪತಿ, ಅಯುರ್ವೇದ, ಸರ್ಜಿಕಲ್ಸ್ ಸಾಮಾಗ್ರಿ, ಸೌಂದರ್ಯವರ್ಧಕಗಳು ಹಾಗೂ ಸಾಕುಪ್ರಾಣಿ ಮತ್ತು ಪಕ್ಷಿಗಳಿಗೆ ಸಂಬಂಧಿಸಿದ ಔಷಧಿಗಳೂ ಇಲ್ಲಿ ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದ್ದು, ಗ್ರಾಹಕ ಜನತೆ ಇದರ ಲಾಭ ಪಡೆಯುವಂತೆ ಮಾಲೀಕರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here