ಸುಳ್ಯಪದವು-ಆಮ್ ಆದ್ಮಿ ಪಾರ್ಟಿಯಿಂದ ಚುನಾವಣಾ ಪ್ರಚಾರ

0


ಭ್ರಷ್ಟಾಚಾರ ರಹಿತ ಪುತ್ತೂರಿಗೆ ನನಗೆ ಮತ ನೀಡಿ-ಡಾ.ವಿಶುಕುಮಾರ್

ಪುತ್ತೂರು: ಆಮ್ ಆದ್ಮಿ ಪಾರ್ಟಿಯಿಂದ ಸುಳ್ಯಪದವು ಜಂಕ್ಷನ್‌ನಲ್ಲಿ ಪಕ್ಷದ ಅಭ್ಯರ್ಥಿ ಡಾ.ಬಿ.ಕೆ.ವಿಶುಕುಮಾರ್ ಗೌಡ ಪರವಾಗಿ ಪ್ರಚಾರ ನಡೆಸಲಾಯಿತು. ಅಭ್ಯರ್ಥಿ ಡಾ.ಬಿ.ಕೆ.ವಿಶುಕುಮಾರ್ ಗೌಡ ಮಾತನಾಡಿ ಸುಳ್ಯಪದವು ಕೋಟಿ ಚೆನ್ನಯರ ಸಂಬಂಧಪಟ್ಟ ಊರು. ಈ ಭಾಗದಲ್ಲಿ ನನ್ನ ತಂದೆ ಕುಶಲಪ್ಪ ಗೌಡರು ಹಲವಾರು ವರ್ಷಗಳ ಮೊದಲು ಗ್ರಾಮದ ವಿ ಎ ಆಗಿ ಭ್ರಷ್ಟಾಚಾರ ರಹಿತರಾಗಿ ಜನರಿಗೆ ಚಿರಪರಿಚಿತರು ಅವರ ಹಾಗೆ ರಾಜಕೀಯವಾಗಿ ನಿಮ್ಮ ಮುಂದೆ ಬಂದು ಭ್ರಷ್ಟಾಚಾರ ರಹಿತವಾದ ಪುತ್ತೂರಿನ ಶಾಸಕನಾಗಲು ಸುಳ್ಯಪದವಿನ ಜನರು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿ ನಿಮ್ಮ ಮತವನ್ನು ನೀಡಿ ಎಂದು ಹೇಳಿದರು.

ಆಮ್ ಆದ್ಮಿ ಪಕ್ಷ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಪುರುಷೋತ್ತಮ ಗೌಡ ಕೋಲ್ಪೆ ಮಾತನಾಡಿ ಈ ಊರಿನ ಬಡವರ ಮತ್ತು ಕೂಲಿ ಕಾರ್ಮಿಕರ ಮಕ್ಕಳ ಭವಿಷ್ಯದ ವಿದ್ಯಾಭ್ಯಾಸವನ್ನು ಉಚಿತವಾಗಿ ನೀಡಬೇಕಾದರೆ ಆಮ್ ಆದ್ಮಿ ಪಾರ್ಟಿಗೆ ಮತ ನೀಡಿ ಎಂದರು. ಪಕ್ಷದ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here