ಸ್ಥಳೀಯ ಮನೆಯೊಂದರ ಸಿಸಿ ಕ್ಯಾಮರದಲ್ಲಿ ದಾಖಲೆ
ಪುತ್ತೂರು: ಕಳೆದೆರಡುಮೂರು ದಿನಗಳಿಂದ ಬನ್ನೂರು ಗ್ರಾಮದ ಸೇಡಿಯಾಪು ಸಮೀಪ ತೋಟಕ್ಕೆ ನುಗ್ಗಿದ ಕಾಡುಕೋಣ ಮೇ2ರಂದು ಕೋಡಿಂಬಾಡಿ ಗೇರು ನಡುತೋಪಿನ ಮೂಲಕ ಪಕ್ಕದ ತೋಟಕ್ಕೆ ನುಗ್ಗಿದೆ. ಗೇರು ನಡುತೋಪಿನ ಪಕ್ಕದ ಮನೆಯೊಂದರಲ್ಲಿ ಅಳವಡಿಸಿದ ಸಿ.ಸಿ ಕ್ಯಾಮರದಲ್ಲಿ ಕಾಡುಕೋಣ ಸಂಚರಿಸುತ್ತಿರುವ ಕುರಿತು ದಾಖಲೆ ಆಗಿದೆ.
ಬನ್ನೂರು ಗ್ರಾಮದ ಸೇಡಿಯಾಪು ಬದಿಯಡ್ಕ ಎಂಬಲ್ಲಿ ತೋಟಕ್ಕೆ ನುಗ್ಗಿದ ಕಾಡುಕೋಣ ತೋಟದಲ್ಲಿ ಕೃಷಿ ಹಾನಿ ಮಾಡಿದೆ. ಕೃಷಿ ನೀರಾವಾರಿಯ ಪೈಪ್‌ಗಳಿಗೆ ಹಾನಿಯಾಗಿತ್ತು. ಇದೀಗ ಮೇ2ರಂದು ರಾತ್ರಿ ಕೋಡಿಂಬಾಡಿಯ ಸರಕಾರಿ ಗೇರು ತೋಪಿಗೆ ನುಗ್ಗಿದ ಕಾಡುಕೋಣದ ಹಾವಳಿಯ ಕುರಿತು ಗೇರು ತೋಪಿನ ಪಕ್ಕದಲ್ಲಿರುವ ಜಿನ ನಿವಾಸ ಹರ್ಷೇಂದ್ರ ಜೈನ್‌ರವರ ಮನೆಯ ಸಿಸಿ ಕ್ಯಾಮರದಲ್ಲಿ ದಾಖಲೆಯಾಗಿದೆ. ಅವರ ತೋಟಕ್ಕೂ ನುಗ್ಗಿ ಕೃಷಿ ಹಾನಿ ಮಾಡಿದೆ. ಕಾಡುಕೋಣ ಹಾವಳಿ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.
ಅರಣ್ಯ ಇಲಾಖೆಯಿಂದ ಪರಿಶೀಲನೆ:
ಬನ್ನೂರು ಗ್ರಾಮದ ಬದಿಯಡ್ಕದಲ್ಲಿ ಕಾಡು ಕೋಣ ಹಾವಳಿ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಲ್ಲಿ ತೆರಳಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ತೋಟದಲ್ಲಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.