




ಪುತ್ತೂರು: ರಾಷ್ಟ್ರಮಟ್ಟದ ಹೈಜಂಪ್ ಸ್ಪರ್ಧೆಯಲ್ಲಿ ಪುತ್ತೂರಿನ ಜಿ.ಎಂ. ಕೀರ್ತಿ ಬೆಳ್ಳಿಪದಕ ಗಳಿಸಿದ್ದಾರೆ.



ಲಕ್ನೋದ ಗುರುಗೋವಿಂದ್ ಸಿಂಗ್ ಸ್ಪೋರ್ಸ್ ಕಾಲೇಜಿನಲ್ಲಿ ನಡೆದ ಅಂಡರ್ 17 ಎಸ್.ಜಿ.ಎಫ್.ಐ. ನ್ಯಾಶನಲ್ ಲೆವೆಲ್ ಅಥ್ಲೆಟಿಕ್ ಮೀಟ್ 2025-26ರಲ್ಲಿ 1.63 ಮೀಟರ್ ಎತ್ತರ ಹಾರುವ ಮೂಲಕ ಇವರು ಈ ಸಾಧನೆ ಮಾಡಿದ್ದಾರೆ.






ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ 17 ವರ್ಷ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ 2025-2026ರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿ.ಎಂ. ಕೀರ್ತಿ ಅವರು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರು. ಪುತ್ತೂರಿನ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿರುವ ಇವರಿಗೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಬಾರ್ತಿಕುಮೇರು ತರಬೇತಿ ನೀಡುತ್ತಿದ್ದಾರೆ.
ಕೀರ್ತಿ ಅವರ ಕ್ರೀಡಾ ಸಾಧನೆಗೆ ಪುತ್ತೂರಿನ ಯು.ಆರ್. ಪ್ರಾಪರ್ಟೀಸ್ ಮಾಲಕ ಉಜ್ವಲ್ ಪ್ರಭು ಪ್ರೋತಾಹ ನೀಡುತ್ತಿದ್ದಾರೆ.
ಕೀರ್ತಿ ಅವರು ಬೆಟ್ಟಂಪಾಡಿ ಗ್ರಾಮದ ಗುಮ್ಮಟಗದ್ದೆ ನಿವಾಸಿ ಮೋನಪ್ಪ ಅವರ ಪುತ್ರಿ.





