ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆರತಿ ಬೆಳಗಿ ಉಳ್ಳಾಲ್ತಿ ನಡೆಯಲ್ಲಿ ಕಾಣಿಕೆ ಸಮರ್ಪಿಸಿದ ಯೋಗಿ

0

ಪುತ್ತೂರು:ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಯೋಗಿ ಆದಿತ್ಯನಾಥ್ ಅವರು ದೇವರ ಸತ್ಯ ಧರ್ಮ ನಡೆಯಲಿ ಪ್ರಾರ್ಥನೆ ಮಾಡಿ, ತಾನೇ ಆರತಿ ಬೆಳಗಿದರು. ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಕಾರ್ಯಕ್ರಮದ ಯಶಸ್ವಿಗಾಗಿ ಶತರುದ್ರ ಸೇವೆ ಮಾಡಿದ ವಿಚಾರ ಪ್ರಸ್ತಾಪಿಸಿ ಪ್ರಾರ್ಥನೆ ಮಾಡಿದರು.

ಬಳಿಕ ಯೋಗಿಯವರು ಭದ್ರತಾ ಸಿಬ್ಬಂದಿಗಳ ಸೂಚನೆ ಮೇರೆಗೆ ದೇವಳದ ಹೊರಗೆ ಹೋಗದೆ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರ ವಿನಂತಿಯಂತೆ ದೇವಳದ ಗುಡಿ ಗೋಪುರಗಳಿಗೆ ಸುತ್ತು ಬರಲಾರಂಭಿಸಿದರು. ಈ ನಡುವೆ ದೇವಳದಲ್ಲಿ ಬಾಲ ಗಣಪತಿಯ ವಿಶೇಷತೆ ಮತ್ತು ಶ್ರೀ ಉಳ್ಳಾಲ್ತಿ ಅಮ್ಮನವರ ವಿಶೇಷತೆ ಕುರಿತು ದೇವಳದ ವಾಸ್ತು ಇಂಜಿನಿಯರ್ ಪಿ.ಜಿ ಜಗನ್ನಿವಾಸ ರಾವ್ ವಿವರಿಸಿದರು.

ಇದನ್ನು ಆಲಿಸಿದ ಯೋಗಿ ಆದಿತ್ಯನಾಥ್ ಅವರು ಉಳ್ಳಾಳ್ತಿ ನಡೆಯಿಂದ ಮುಂದೆ ಸಾಗಿದವರು ಪುನಃ ಹಿಂದಿರುಗಿ ಬಂದು ಶ್ರೀ ಉಳ್ಳಾಳ್ತಿ ಅಮ್ಮನ ನಡೆಯಲ್ಲಿರುವ ಕಾಣಿಕೆ ಹುಂಡಿಗೆ ಕಾಣಿಕೆ ಸಮರ್ಪಣೆ ಮಾಡಿದರು. ಈ ಸಂದರ್ಭ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾಕ್ಟರ್ ಪ್ರಭಾಕರ್ ಭಟ್ ಕಲ್ಲಡ್ಕ ,ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಚಂದ್ರಶೇಖರ್‌ ರಾವ್ ಬಪ್ಪಳಿಗೆ‌, ನಗರಸಭೆ ಉಪಾಧ್ಯಕ್ಷ ವಿದ್ಯಾ ಆರ್‌ ಗೌರಿ, ಸಹಿತ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯ ಶೇಖರ್ ನಾರಾವಿ, ರವೀಂದ್ರನಾಥ್ ರೈ ಬಳ್ಳಮಜಲು, ರಾಮಚಂದ್ರ ಕಾಮತ್, ಬಿ .ಅಯ್ತಪ್ಪ ನಾಯ್ಕ್‌, ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ,ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿ ಕೃಷ್ಣ ಹಸಂತಡ್ಕ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ, ಮಂಗಳೂರು ವಿಭಾಗ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಚುನಾವಣಾ ನಿರ್ವಾಹಣ ಸಮಿತಿ ಸಂಚಾಲಕ ಎಸ್ ಅಪ್ಪಯ್ಯ ಮಣಿಯಾಣಿ, ಹರೀಶ್ ಬಿಜತ್ರೆ, ಮಧು ನರಿಯೂರು ಉಪಸ್ಥಿತರಿದ್ದರು.

ಬೆಳಿಗ್ಗೆ ರೋಡ್ ಶೋ ಕಾರ್ಯಕ್ರಮದ ಯಶಸ್ವಿಗಾಗಿ ಬಿಜೆಪಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶತರುದ್ರ ಸೇವೆ ನೆರವೇರಿಸಲಾಯಿತು ಶಾಸಕ ಸಂಜೀವ ಮಠಂದೂರು ಅವರು ಶತರುದ್ರ ಸೇವಾ ಸಂಕಲ್ಪದಲ್ಲಿ ಭಾಗವಹಿಸಿ ತುಪ್ಪದ ದೀಪ ಹಚ್ಚಿದರು .ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕ ವೇ ಮೂ ವಿ ಎಸ್ ಭಟ್ ಸಂಕಲ್ಪ ನೆರವೇರಿಸಿದರು .

LEAVE A REPLY

Please enter your comment!
Please enter your name here