




*ಬಹಿರಂಗ ರೋಡ್ ಶೋ ದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಯೋಗಿ ಆದಿತ್ಯನಾಥ್ ಮತಬೇಟೆ



*ಸುಮಾರು ಎರಡೂ ಕಾಲು ಗಂಟೆ ತಡವಾಗಿ ಬಂದರೂ ಕುಗ್ಗದ ಕಾರ್ಯಕರ್ತರ ಜೋಶ್







ಪುತ್ತೂರು: ಮುತ್ತಿನ ಊರು ಪುತ್ತೂರೆಂದು ಪ್ರಸಿದ್ದಿ ಪಡೆದ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಕ್ಷೇತ್ರದಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಪುತ್ತೂರಿನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮತಬೇಟೆ ಮಾಡಿದರು. ಸುಮಾರು ಎರಡೂಕಾಲು ಗಂಟೆ ತಡವಾಗಿ ಎಂಟ್ರಿಯಾದರೂ ಕುಗ್ಗದ ಕಾರ್ಯಕರ್ತ ಜೋಶ್ ನಲ್ಲಿ ರೋಡ್ ಶೋ ನಡೆಯಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರ ದರ್ಶನ ಪಡೆದ ಅವರು ಬಿಜೆಪಿ ಅಭ್ಯರ್ಥಿ ಮತ್ತು ಪ್ರಮುಖರ ಜೊತೆ ರ್‍ಯಾಲಿಯಲ್ಲಿ ಭಾಗವಹಿಸಿದರು.







