ಪುತ್ತೂರು: ಕೇರಳದ ಹೆಸರಾಂತ ಫರ್ನಿಚರ್ ಮಳಿಗೆ ಇದೀಗ ಪುತ್ತೂರಿಗೂ ಎಂಟ್ರಿ ಕೊಟ್ಟಿದೆ. ಹಲವಾರು ವರ್ಷಗಳಿಂದ ಕೇರಳದ ಕಾಸರಗೋಡು ಹಾಗೂ ಕಾಞಂಗಾಡ್‌ನಲ್ಲಿ ಫರ್ನಿಚರ್ ತಯಾರಿಕಾ ಫ್ಯಾಕ್ಟರಿಯನ್ನು ಹೊಂದಿರುವ ಮತ್ತು ಕೇರಳದಲ್ಲಿ ಮನೆ ಮಾತಾಗಿರುವ ಡಿ.ಜಿ ಫರ್ನಿಚರ್ ಫ್ಯಾಕ್ಟರಿ ಔಟ್‌ಲೆಟ್ ಮೇ.8ರಂದು ಪುತ್ತೂರು ದರ್ಬೆ ಸರ್ಕಲ್ ಬಳಿಯ ರಹೀಮ್ಸ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು. ನೂತನ ಮಳಿಗೆಯನ್ನು ಅಸ್ಸಯ್ಯದ್ ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸಿ ದುವಾ ನೆರವೇರಿಸಿದರು.
ನಗರಸಭಾ ಮುಖ್ಯಾಧಿಕಾರಿ ಮಧು ಮನೋಹರ್, ಹೆಲ್ತ್ ಆಫಿಸರ್ ಶ್ವೇತಾ, ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ, ರಹೀಮ್ಸ್ ಕಾಂಪ್ಲೆಕ್ಸ್‌ನ ಮಾಲಕಿ ಸಾಯಿರಾ ಝುಬೇರ್, ಮೇನಾಲ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ಅಧ್ಯಕ್ಷ ಹನೀಫ್ ಮಧುರಾ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ, ಕಾವೇರಿ ಪ್ಲೈವುಡ್‌ನ ಮಾಲಕ ಕರೀಂ ಕಾವೇರಿ, ಎಸ್‌ಡಿಪಿಐ ಮುಖಂಡ ಬಾತಿಷಾ ಬಡಕ್ಕೋಡಿ, ಯುನೈಟೆಡ್ ಕನ್‌ಸ್ಟ್ರಕ್ಷನ್‌ನ ಹಾರಿಸ್, ಉದ್ಯಮಿ ಹನೀಫ್ ದರ್ಬೆ ಸೇರಿದಂತೆ ಹಲವಾರು ಮಂದಿ ಆಗಮಿಸಿ ಶುಭ ಹಾರೈಸಿದರು.
ಆಧುನಿಕ ಶೈಲಿಯ ಫರ್ನಿಚರ್‌ಗಳು ಲಭ್ಯ:
ಡಿ.ಜಿ ವುಡ್ ಫ್ಯಾಕ್ಟರಿಯಲ್ಲಿ ತಯಾರಿಸಿದ ಪೀಠೋಪಕರಣಗಳನ್ನು ನೇರವಾಗಿ ಗ್ರಾಹಕರಿಗೆ ಹೋಲ್‌ಸೆಲ್ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಆಧುನಿಕ ಶೈಲಿಯ ವಿವಿಧ ವಿನ್ಯಾಸಗಳ ಪೀಠೋಪಕರಣಗಳು ಕಡಿಮೆ ಮಳಿಗೆಯಲ್ಲಿ ಲಭ್ಯವಿದೆ.
ಬೆಡ್‌ರೂಂ ಸೆಟ್, ವುಡನ್ ಸೋಫಾ, ಡಬಲ್ ಡೋರ್ ವಾರ್ಡ್‌ರೋಬ್, ತ್ರೀ ಡೋರ್ ವಾರ್ಡ್‌ರೋಬ್, ಸೋಫಾ ಸೆಟ್, ಕಾರ್ನರ್ ಸೋಫಾ, ವುಡನ್ ಸೋಫಾ, ಡಿನ್ನರ್ ಸೆಟ್, ವುಡನ್ ಕೋಟ್, ದಿವಾನ್ ಕೋಟ್, ಬೆಡ್, ಕಾರ್ನರ್ ಸೋಫಾ ಸೆಟ್, ಕಿಚನ್ ಡೈನಿಂಗ್ ಸೆಟ್, ಬೆಡ್, ಸ್ಟಡೀ ಟೇಬಲ್ ಸೇರಿದಂತೆ ವಿವಿಧ ಬಗೆಯ ಆಧುನಿಕ ಶೈಲಿಯ ಗೃಹೋಪಯೋಗಿ ಪೀಠೋಪಕರಣಗಳು ಫ್ಯಾಕ್ಟರಿ ಬೆಲೆಯಲ್ಲಿ ಲಭ್ಯವಿದೆ ಎಂದು ಡಿ.ಜಿ ಫರ್ನಿಚರ‍್ಸ್‌ನ ಆಡಳಿತ ಪಾಲುದಾರರು ತಿಳಿಸಿದ್ದಾರೆ.
ಡಿ.ಜಿ ಫರ್ನಿಚರ್ ಮಳಿಗೆಯ ಮ್ಯಾನೇಜಿಂಗ್ ಪಾರ್ಟ್ನನ್ ಸಲೀಂ ಹಾಗೂ ಖಾದರ್ ಸ್ವಾಗತಿಸಿ ಅತಿಥಿಗಳನ್ನು ಸತ್ಕರಿಸಿದರು. ಸಿಬ್ಬಂದಿ ಜಮಾಲ್ ಸಹಕರಿಸಿದರು.