ಪುತ್ತೂರು: ವಿಧಾನಸಭಾ ಚುನಾವಣೆಗೆ ಪುತೂರು ಕ್ಷೇತ್ರದ ಎಲ್ಲೆಡೆ ಬಿರುಸಿನ ಮತದಾನ ನಡೆಯುತ್ತಿದೆ. ಪುತ್ತೂರು ನಗರ ಸಭಾ ವ್ಯಾಪ್ತಿಯ ನೆಲ್ಲಿಕಟ್ಟೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 130ರಲ್ಲಿ ಮತದಾನ ಮಂದಗತಿಯಲ್ಲಿ ಸಾಗುತ್ತಿದೆ.
ಎಲ್ಲೆಡೆ ಮತಯಂತ್ರದಲ್ಲಿ ಗುಂಡಿ ಒತ್ತಿದ ಬಳಿಕ ಬೀಫ್ ಶಬ್ದ 10-13 ಸೆಕೆಂಡ್ ನಲ್ಲಿ ಬಂದರೆ ಇಲ್ಲಿ 1 ನಿಮಿಷದಷ್ಟು ಸಮಯ ತೆಗೆದುಕೊಳ್ಳುವುದೇ ಮತದಾನ ಮಂದಗತಿಯಲ್ಲಿ ಸಾಗಲು ಕಾರಣ ಎನ್ನಲಾಗಿದೆ. ಇನ್ನುಳಿದಂತೆ ವೋಟರ್ ಐಡಿಯಿದ್ದರೂ ಪಟ್ಟಿಯಲ್ಲಿ ಹೆಸರಿಲ್ಲ ಎನ್ನುವ ಕಾರಣಕ್ಕೆ ಮೂವರಿಗೆ ಮತದಾನಕ್ಕೆ ನಿರಾಕರಿಸಲಾಗಿದೆ. ಟೆಂಡರ್ ಮತದಾನ ಮಾಡಲು ಅವಕಾಶ ಕೋರಿದರೂ ಆಪ್ ನಲ್ಲಿ ಹೆಸರಿದ್ದರೆ ಮಾತ್ರ ಮತ ಚಲಾಯಿಸಬಹುದೆಂದು ಹೇಳಿರುವ ಮತಗಟ್ಟೆ ಅಧಿಕಾರಿಗಳು ಮತದಾನಕ್ಕೆ ನಿರಾಕರಿಸಿದ್ದಾರೆ.