ಎಸ್ ಎಸ್ ಎಲ್ ಸಿ: ನವೋದಯ ಪ್ರೌಢಶಾಲೆ ಬೆಟ್ಟಂಪಾಡಿ 90.32 % ಫಲಿತಾಂಶ

0

ಬೆಟ್ಟಂಪಾಡಿ: ಮಾರ್ಚ್ 2023ರಲ್ಲಿ ಜರಗಿದ 10ನೇ ತರಗತಿಯ ಪರೀಕ್ಷೆಗೆ ನವೋದಯ ಪ್ರೌಢಶಾಲೆ ಬೆಟ್ಟಂಪಾಡಿಯ 31 ವಿದ್ಯಾರ್ಥಿಗಳು ಹಾಜರಾಗಿದ್ದು, 7 ಮಂದಿ ವಿಶಿಷ್ಟ ಶ್ರೇಣಿಯಲ್ಲಿ,17 ಪ್ರಥಮ ಶ್ರೇಣಿಯಲ್ಲಿ ಹಾಗೂ 4 ಮಂದಿ ದ್ವಿತೀಯ ಶ್ರೇಣಿಯಲ್ಲಿ ,ಒಟ್ಟು 28 ಮಂದಿ ಉತ್ತೀರ್ಣರಾಗಿ 90.32 % ಫಲಿತಾಂಶವು ದಾಖಲಾಗಿರುತ್ತದೆ.
ಶಾಲಾ ಪ್ರಥಮ ವೈದೇಹಿ ಕೆ 591 (94.56 %) ಗಣರಾಜ ಭಟ್ ಮತ್ತು ಆರತಿ ಜಿ ಭಟ್ ದಂಪತಿ ಪುತ್ರಿ, ಶಾಲಾ ದ್ವಿತೀಯ ಅನುಷಾ 573 (91.68 %) ಕೇಶವ ನಾಯಕ್ ಮತ್ತು ಮಾಲತಿ ದಂಪತಿ ಪುತ್ರಿ, ಶಾಲಾ ತೃತೀಯ ವಂದನಾ – 572 (91.52%) ಮತ್ತು 4 ನೇ ಸ್ಥಾನ ಅರ್ಚನಾ 557 (89.12%) ಇವರು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಬಟ್ಯಮೂಲೆ ಶ್ರೀ ಕೃಷ್ಣ ಭಟ್ ಬಿ ಮತ್ತು ಲತಾ ಎಸ್ ದಂಪತಿಗಳ ಅವಳಿ ಮಕ್ಕಳು, ದ್ವಿತಿ ಬಿ 554 (88.64%) ನಾಗೇಶ್ ನಾಯ್ಕ ಮತ್ತು ಮೀನಾಕ್ಷಿ ದಂಪತಿ ಪುತ್ರಿ, ಧನುಶ್ರೀ 550(88%) ಜನಾರ್ದನ ಕೆ ಮತ್ತು ನಿರ್ಮಲಾ ಕೆ ದಂಪತಿ ಪುತ್ರಿ , ಪಾತಿಮಾ ಅನಪರ್ಸಿನಾ 540 (87.36 %) ಅಬ್ದುಲ್ ಆಲಿ ಮತ್ತು ಫಾತಿಮತ್ ಜೋಹಾರ ದಂಪತಿ ಪುತ್ರಿ, ಪೂಜಾಶ್ರೀ 519(83.04%) ವೆಂಕಪ್ಪ ನಾಯಕ ಬಿ ಮತ್ತು ಜಯಂತಿ ದಂಪತಿ ಪುತ್ರಿ ,ರೆಹನಾ ಶಮ್ರೀನಾ 518 (82.88 %) ಮಹಮ್ಮದ್ ಅಲಿ ಮತ್ತು ಸಕೀನ ದಂಪತಿ ಪುತ್ರಿ, ಸುಹೈಬಾ 516 (82.5 %) ಮೊಯ್ದೀನ್ ಮತ್ತು ರಶೀದಾ ದಂಪತಿ ಪುತ್ರಿ,ಮಹಮ್ಮದ್ ಮಿದ್ಲಾಜ್ 513 (82.08 %) ಅಲಿ ಮತ್ತು ಮಮ್ತಾಜ್ ರವರ ಪುತ್ರ ,ಪೂಜಿತ್ 501 (80.16 %) ಸಂಕಪ್ಪ ಪೂಜಾರಿ ಮತ್ತು ಶಶಿಕಲಾ ದಂಪತಿ ಪುತ್ರ, 12 ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುತ್ತಾರೆ. ಪರೀಕ್ಷೆಗೆ ಹಾಜರಾದ 10 ಎಸ್ ಟಿ ವಿದ್ಯಾರ್ಥಿಗಳಲ್ಲಿ, 6 ಮಂದಿ ರೂ. 15,000 ಮತ್ತು 3 ಮಂದಿ ರೂ. 7,000 ವಿದ್ಯಾರ್ಥಿ ವೇತನ ಪಡೆಯುವ ಅರ್ಹತೆಯನ್ನು ಹೊಂದಿರುತ್ತಾರೆ ಎಂದು ಶಾಲಾ ಮುಖ್ಯ ಗುರು ಪುಷ್ಪಾವತಿ ಎಸ್. ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here