ಸುಳ್ಯದಲ್ಲಿ ಎಂ.ಸಿ.ಸಿ ಟ್ರೋಫಿ ಕ್ರಿಕೆಟ್ ಪಂದ್ಯಾಟ-ಸ್ಪೋರ್ಟಿಂಗ್ ರೆಂಜಲಾಡಿ ಚಾಂಪಿಯನ್

0

ಪುತ್ತೂರು: ಮಾರ್ನಿಂಗ್ ಕ್ರಿಕೆಟ್ ಕ್ಲಬ್(ಎಂ.ಸಿ.ಸಿ) ಸುಳ್ಯ ವತಿಯಿಂದ ಸುಳ್ಯ ಜೂನಿಯರ್ ಕಾಲೇಜು ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಸ್ಪೋರ್ಟಿಂಗ್ ರೆಂಜಲಾಡಿ ತಂಡ ಪ್ರಥಮ ಸ್ಥಾನ ಪಡೆಯುವ ಮೂಲಕ ಚಾಂಪಿಯನ್ ಆಗಿ ಮೂಡಿ ಬಂದಿದೆ.


ಡಿ.14ರಂದು ಸಂಜೆ ನಡೆದ ಫೈನಲ್ ಪಂದ್ಯಾಟದಲ್ಲಿ ಅರಂಬೂರು ಕ್ರಿಕೆಟರ‍್ಸ್ ತಂಡವನ್ನು ಸೋಲಿಸಿ ಸ್ಪೋರ್ಟಿಂಗ್ ರೆಂಜಲಾಡಿ ತಂಡ ಚಾಂಪಿಯನ್ ಆಗಿದ್ದು ಪ್ರಥಮ ಬಹುಮಾನವಾದ ರೂ.25೦25 ನಗದು ಹಾಗೂ ಬೃಹತ್ ಟ್ರೋಫಿಯನ್ನು ಪಡೆದುಕೊಂಡಿತು. ಅತಿಥಿಗಳು ಬಹುಮಾನ ವಿತರಿಸಿ ಅಭಿನಂದಿಸಿದರು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಸ್ಪೋರ್ಟಿಂಗ್ ರೆಂಜಲಾಡಿ ತಂಡದ ಮುಸ್ತಫಾ ರೆಂಜಲಾಡಿಯವರು ಎರಡು ಪಂದ್ಯ ಶ್ರೇಷ್ಠ ಪ್ರಶಸ್ತಿ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.

ಸ್ಪೋರ್ಟಿಂಗ್ ರೆಂಜಲಾಡಿ ತಂಡದಲ್ಲಿ ರಫೀಕ್ ರೆಂಜಲಾಡಿ, ಹನೀಫ್ ರೆಂಜಲಾಡಿ, ಮಜೀದ್ ರೆಂಜಲಾಡಿ, ಆಬಿದ್ ರೆಂಜಲಾಡಿ, ಜೀವನ್ ತಿಂಗಳಾಡಿ, ಹಾರಿಸ್ ಕೂಡುರಸ್ತೆ, ಯೂಸುಫ್ ರೆಂಜಲಾಡಿ, ಉಮ್ಮರ್ ಸುಲ್ತಾನ್, ಅಶ್ವಥ್ ನೇರೋಳ್ತಡ್ಕ, ಮುಸ್ತಫಾ ರೆಂಜಲಾಡಿ, ಅಕ್ಷಯ್ ಸೊರಕೆ, ತ್ವಾಹಿರ್ ಶಾ ಕಲ್ಪಣೆ ಹಾಗೂ ಅವಿನಾಶ್ ನೇರೋಳ್ತಡ್ಕ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here