ಪುತ್ತೂರು:ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಇದರ ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಕಥೋಲಿಕ್ ಸಭಾ ಪುತ್ತೂರು ಘಟಕದ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಜರಗಿತು.
ಅಧ್ಯಕ್ಷರಾಗಿ ಪಿಂಟೋ ಸ್ಟುಡಿಯೋ ಆಂಡ್ ವೀಡಿಯೋ ಮಾಲಕ ಅರುಣ್ ಮೈಕಲ್ ಪಿಂಟೋ ಸಾಮೆತ್ತಡ್ಕ, ಕಾರ್ಯದರ್ಶಿಯಾಗಿ ಎಂಸಿಸಿ ಬ್ಯಾಂಕ್ ಪಿಗ್ಮಿ ಸಂಗ್ರಾಹಕ ಪಾವ್ಲ್ ಮೊಂತೇರೊ ಕಲ್ಲಾರೆ, ಕೋಶಾಧಿಕಾರಿಯಾಗಿ ಕ್ಲಾಸಿ ಕ್ಲಿಕ್ಸ್ ಸ್ಟುಡಿಯೋ ಆಂಡ್ ವೀಡಿಯೋ ಮಾಲಕ ರೋಶನ್ ಡಾಯಸ್ ಬಪ್ಪಳಿಗೆ ಆಯ್ಕೆಯಾಗಿದ್ದಾರೆ. ಉಳಿದಂತೆ ಸಮಿತಿಯ ಉಪಾಧ್ಯಕ್ಷರಾಗಿ ರೋಯ್ಸ್ ಪಿಂಟೋ ದರ್ಬೆ, ಜೊತೆ ಕಾರ್ಯದರ್ಶಿ ಅನಿಲ್ ಮಸ್ಕರೇನ್ಹಸ್ ಸಾಮೆತ್ತಡ್ಕ, ರಾಜಕೀಯ ಸಂಚಾಲಕರಾಗಿ ಮೌರಿಸ್ ಮಸ್ಕರೇನ್ಹಸ್ ಸಾಮೆತ್ತಡ್ಕ, ಸಮುದಾಯ ಅಭಿವೃದ್ಧಿ ಸಂಚಾಲಕರಾಗಿ ವಿನ್ಸೆಂಟ್(ರುತು) ತಾವ್ರೋ ಎಪಿಎಂಸಿ ರಸ್ತೆ, ನಿಕಟಪೂರ್ವ ಅಧ್ಯಕ್ಷರಾಗಿ ಮೆಲ್ವಿನ್ ಫೆರ್ನಾಂಡೀಸ್ ಎಪಿಎಂಸಿ ರಸ್ತೆರವರು ಆಯ್ಕೆಯಾಗಿರುತ್ತಾರೆ.
ಕಥೋಲಿಕ್ ಸಭಾ ಪುತ್ತೂರು ಘಟಕದ ಆತ್ಮೀಕ ನಿರ್ದೇಶಕ, ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ರವರ ಮಾರ್ಗದರ್ಶನದಲ್ಲಿ ಕಥೋಲಿಕ್ ಸಭಾ ಮಂಗಳೂರು ಇದರ ಕೇಂದ್ರೀಯ ಸಮಿತಿಯ ಪ್ರತಿನಿಧಿ ಜೋಕಿಂ ಮಾರ್ಟಿಸ್ ಕಡಬ ಹಾಗೂ ಕಥೋಲಿಕ್ ಸಭಾ ಪುತ್ತೂರು ವಲಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್ ರವರು ಚುನಾವಣಾಧಿಕಾರಿಗಳಾಗಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.