ಜಿಲ್ಲೆಯ 60 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಾಳೆ(ಮೇ13) ಪ್ರಕಟ; ದ.ಕ.ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

0

ಪುತ್ತೂರು: ಕರ್ನಾಟಕ ವಿಧಾನಸಭೆಗೆ ಮೇ 10ರಂದು ಶಾಂತಿಯುತ ಮತದಾನ ನಡೆದಿದ್ದು ಮೇ13ರಂದು ಮತ ಎಣಿಕೆ ನಡೆಯಲಿದೆ. ಪುತ್ತೂರು, ಸುಳ್ಯ, ಬಂಟ್ವಾಳ ಸಹಿತ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 60 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಎನ್‌ಐಟಿಕೆಯ ಕೇಂದ್ರ ಗ್ರಂಥಾಲಯದಲ್ಲಿ ನಿರ್ಮಿಸಲಾಗಿರುವ ಭದ್ರತಾ ಕೊಠಡಿಯಲ್ಲಿ ಭದ್ರವಾಗಿದೆ. ಈ ಮಧ್ಯೆ ಮತ ಎಣಿಕೆ ನಡೆಯುವ ದಿನದಂದು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ದ.ಕ.ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ರವಿ ಕುಮಾರ್ ಎಂ.ಆರ್.ಆದೇಶಿಸಿದ್ದಾರೆ.

ಸುರತ್ಕಲ್ ಎನ್‌ಐಟಿಕೆ ಕೇಂದ್ರ ಗ್ರಂಥಾಲಯದಲ್ಲಿ ಮತಯಂತ್ರಗಳನ್ನು ಸುರಕ್ಷಿತವಾಗಿ ಇರಿಸಲಾಗಿರುವ ಭದ್ರತಾ ಕೊಠಡಿಗೆ ಚುನಾವಣಾ ಆಯೋಗದ ನಿರ್ದೇಶನದಂತೆ ಮೂರು ಪಾಳಿಯಲ್ಲಿ ಕೇಂದ್ರ ಮೀಸಲು ಪಡೆಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಚುನಾವಣಾ ಆಯೋಗದ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
ಸದ್ಯ ಎನ್‌ಐಟಿಕೆಯಲ್ಲಿ ನಿರ್ಮಿಸಲಾಗಿರುವ ಭದ್ರತಾ ಕೊಠಡಿಯ ಬಳಿಗೆ ರಾಜಕೀಯ ಪಕ್ಷಗಳ ನೇತಾರರು ಸೇರಿದಂತೆ ಯಾವೊಬ್ಬರಿಗೂ ಅವಕಾಶ ನೀಡಲಾಗುತ್ತಿಲ್ಲ. ಎನ್‌ಐಟಿಕೆ ಆವರಣದ ಸುತ್ತ ಸುರತ್ಕಲ್ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿದೆ.‌ ಭದ್ರತಾ ಕೊಠಡಿಯಲ್ಲಿ ಭದ್ರ ಆಗಿರುವ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮೇ13ರಂದು ಹೊರಬೀಳಲಿದೆ.

ಮತ ಎಣಿಕೆಯ ಸಂದರ್ಭ ಜಿಲ್ಲಾಡಳಿತದಿಂದ ಅನುಮತಿ ಪಡೆದಿರುವ ಪತ್ರಕರ್ತರು ಹಾಗೂ ಅಭ್ಯರ್ಥಿಗಳ ಏಜೆಂಟರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಭದ್ರತೆಯನ್ನು ಏರ್ಪಡಿಸಲು ಸಿಆರ್‌ಪಿಎಫ್, ಕೆಎಸ್‌ಆರ್‌ಪಿ ತುಕಡಿಗಳನ್ನು ಬಳಸಲಾಗುವುದು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ.‌

ಜಿಲ್ಲೆಯಾದ್ಯಂತ ನಿಷೇಧಾಜ್ಞೆ: ವಿಧಾನ ಸಭೆ ಚುನಾವಣೆ-2023ರ ಮತ ಎಣಿಕೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮೇ 13ರಂದು ದ.ಕ.ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ದ.ಕ.ಜಿಲ್ಲಾ ದಂಡಾಽಕಾರಿ, ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ರವಿ ಕುಮಾರ್ ಎಂ.ಆರ್.ಆದೇಶ ಮಾಡಿರುತ್ತಾರೆ.

ಮದ್ಯ ಬಂದ್: ಮೇ 13ರ ಬೆಳಿಗ್ಗೆ 6 ಗಂಟೆಯಿಂದ ಮಧ್ಯ ರಾತ್ರಿ 12 ಗಂಟೆ ತನಕ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಿ ಆದೇಶಿಸಲಾಗಿದೆ.

60 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಾಳೆ ಪ್ರಕಟ: ದ.ಕ.ಜಿಲ್ಲೆಯಲ್ಲಿಯೂ ವಿಧಾನಸಭೆ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 8 ಅಭ್ಯರ್ಥಿಗಳು ಸೇರಿದಂತೆ ದ.ಕ.ಜಿಲ್ಲೆಯ 8 ಕ್ಷೇತ್ರಗಳಲ್ಲಿ ಒಟ್ಟು 60 ಮಂದಿ ಅಭ್ಯರ್ಥಿಗಳು ಈಗಾಗಲೇ ಚುನಾವಣೆ ಎದುರಿಸಿದ್ದು ಇವರೆಲ್ಲರ ರಾಜಕೀಯ ಭವಿಷ್ಯ ಮತಯಂತ್ರದೊಳಗೆ ಭದ್ರವಾಗಿದೆ.

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಅಶೋಕ್ ಕುಮಾರ್ ರೈ, ಬಿಜೆಪಿಯಿಂದ ಆಶಾತಿಮ್ಮಪ್ಪ ಗೌಡ, ಜೆಡಿಎಸ್‌ನಿಂದ ದಿವ್ಯಪ್ರಭಾ ಚಿಲ್ತಡ್ಕ, ಆಮ್ ಆದ್ಮಿಯಿಂದ ಡಾ|ಬಿ.ಕೆ.ವಿಶು ಕುಮಾರ್, ಎಸ್‌ಡಿಪಿಐನಿಂದ ಇಸ್ಮಾಯಿಲ್ ಶಾಫಿ ಬೆಳ್ಳಾರೆ,ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಐವನ್ ಫೆರಾವೋ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಅರುಣ್ ಕುಮಾರ್ ಪುತ್ತಿಲ, ಸುಂದರ ಕೊಯಿಲ ಚುನಾವಣೆ ಎದುರಿಸಿದ್ದಾರೆ.

ಸುಳ್ಯ:ಕಡಬ ತಾಲೂಕಿನ 46 ಗ್ರಾಮಗಳ ವ್ಯಾಪ್ತಿಯನ್ನೂ ಹೊಂದಿರುವ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಭಾಗೀರಥಿ ಮುರುಳ್ಯ, ಕಾಂಗ್ರೆಸ್‌ನಿಂದ ಜಿ.ಕೃಷ್ಣಪ್ಪ, ಆಮ್ ಆದ್ಮಿಯಿಂದ ಸುಮನಾ ಬೆಳ್ಳಾರ್ಕರ್, ಜೆಡಿಎಸ್‌ನಿಂದ ಎಚ್.ಎಲ್.ವೆಂಕಟೇಶ್,ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಗಣೇಶ್ ಎಂ.,ಉತ್ತಮ ಪ್ರಜಾಕೀಯದಿಂದ ರಮೇಶ್ ಬೂಡು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸುಂದರ ಮೇರ ಹಾಗು ಪಕ್ಷೇತರ ಅಭ್ಯರ್ಥಿಯಾಗಿ ಗುರುವಪ್ಪ ಚುನಾವಣೆ ಎದುರಿಸಿದ್ದಾರೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಕಾಂಗ್ರೆಸ್‌ನಿಂದ ಬಿ.ರಮಾನಾಥ ರೈ, ಜೆಡಿಎಸ್‌ನಿಂದ ಪ್ರಕಾಶ್ ಗೋಮ್ಸ್, ಆಮ್ ಆದ್ಮಿ ಪಾರ್ಟಿಯಿಂದ ಪುರುಷೋತ್ತಮ ಗೌಡ ಕೋಲ್ಪೆ ಹಾಗೂ ಎಸ್‌ಡಿಪಿಐನಿಂದ ಇಲ್ಯಾಸ್ ಮೊಹಮ್ಮದ್ ಕಣದಲ್ಲಿದ್ದು ಚುನಾವಣೆ ಎದುರಿಸಿದ್ದಾರೆ.‌

ಬೆಳ್ತಂಗಡಿ: ಹರೀಶ್ ಪೂಂಜ-ಬಿಜೆಪಿ, ರಕ್ಷಿತ್ ಶಿವರಾಂ-ಕಾಂಗ್ರೆಸ್, ಅಶ್ರಫ್ ಅಲಿ ಕುಂಞ-ಜೆಡಿಎಸ್, ಅಕ್ಬರ್-ಎಸ್‌ಡಿಪಿಐ, ಜನಾರ್ದನ-ಆಮ್ ಆದ್ಮಿ,ಆದಿತ್ಯ ನಾರಾಯಣ ಕೊಲ್ಲಾಜೆ-ಸರ್ವೋದಯ ಕರ್ನಾಟಕ ಪಕ್ಷ, ಶೈಲೇಶ್ ಆರ್‌ಜೆ-ತುಳುವರೆ ಪಕ್ಷ, ಮಹೇಶ್-ಪಕ್ಷೇತರ.‌

ಮೂಡುಬಿದಿರೆ: ಮಿಥುನ್ ರೈ ಎಂ-ಕಾಂಗ್ರೆಸ್, ಉಮನಾಥ ಕೋಟ್ಯಾನ್-ಬಿಜೆಪಿ, ಅಮರಶ್ರೀ ಅಮರನಾಥ ಶೆಟ್ಟಿ-ಜೆಡಿಎಸ್,ಆಲೋನ್ಸೋ ಫ್ರಾಂಕೋ-ಎಸ್‌ಡಿಪಿಐ, ವಿಜಯನಾಥ ವಿಠಲ ಶೆಟ್ಟಿ-ಆಮ್ ಆದ್ಮಿ, ದಯಾನಂದ-ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ಈಶ್ವರ ಎಸ್.,ದುರ್ಗಾಪ್ರಸಾದ್-ಪಕ್ಷೇತರರು.

ಮಂಗಳೂರು ನಗರ ಉತ್ತರ: ಇನಾಯತ್ ಅಲಿ-ಕಾಂಗ್ರೆಸ್, ಡಾ.ವೈ.ಭರತ್ ಶೆಟ್ಟಿ-ಬಿಜೆಪಿ, ಬಿ.ಎ.ಮೊಯ್ದಿನ್ ಬಾವ-ಜೆಡಿಎಸ್, ಸಂದೀಪ್ ಶೆಟ್ಟಿ-ಆಮ್ ಆದ್ಮಿ ಪಾರ್ಟಿ, ಧರ್ಮೇಂದ್ರ-ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ, ಬಿ.ಪ್ರವೀಣ್‌ಚಂದ್ರ ರಾವ್-ಹಿಂದುಸ್ತಾನ್ ಜನತಾ ಪಕ್ಷ ಸೆಕ್ಯುಲರ್, ಪ್ರಶಾಂತ್-ಉತ್ತಮ ಪ್ರಜಾಕೀಯ ಪಾರ್ಟಿ, ಯಶೋಧಾ-ಕರ್ನಾಟಕ ರಾಷ್ಟ್ರ ಸಮಿತಿ, ಎಚ್.ವಿನಯ ಆಚಾರ್ಯ, ಮ್ಯಾಕ್ಸಿಮ್ ಪಿಂಟೋ-ಪಕ್ಷೇತರರು.

ಮಂಗಳೂರು ನಗರ ದಕ್ಷಿಣ: ಡಿ.ವೇದವ್ಯಾಸ ಕಾಮತ್-ಬಿಜೆಪಿ, ಜೆ.ಆರ್.ಲೋಬೊ-ಕಾಂಗ್ರೆಸ್, ಕೆ.ಸಂತೋಷ್ ಕಾಮತ್-ಆಮ್ ಆದ್ಮಿ ಪಾರ್ಟಿ, ಸುಮತಿ ಎಸ್.ಹೆಗ್ಡೆ-ಜೆಡಿಎಸ್, ಧರ್ಮೇಂದ್ರ-ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ, ಸುಪ್ರೀತ್ ಕುಮಾರ್ ಪೂಜಾರಿ-ಜನಹಿತ ಪಕ್ಷ, ವಿನ್ನಿ ಪಿಂಟೋ-ಕರ್ನಾಟಕ ರಾಷ್ಟ್ರ ಸಮಿತಿ, ಕೆ.ಎಸ್.ಪೈ-ಪಕ್ಷೇತರ.

ಮಂಗಳೂರು: ಯು.ಟಿ.ಖಾದರ್-ಕಾಂಗ್ರೆಸ್, ಸತೀಶ್ ಕುಂಪಲ-ಬಿಜೆಪಿ, ಮುಹಮ್ಮದ್ ರಿಯಾಝ್-ಎಸ್‌ಡಿಪಿಐ, ಮುಹಮ್ಮದ್ ಅಶ್ರ–ಆಮ್ ಆದ್ಮಿ ಪಾರ್ಟಿ,ದೀಪಕ್ ರಾಜೇಶ್ ಕುವೆಲ್ಲೋ-ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದು ಇವರಲ್ಲಿ ಗೆಲ್ಲೋರು ಯಾರು ಎನ್ನುವುದು ಮೇ 13ರಂದು ತಿಳಿಯಲಿದೆ.

ಎನ್‌ಐಟಿಕೆಯಲ್ಲಿ ನಿರ್ಮಿಸಲಾಗಿರುವ ಭದ್ರತಾ ಕೊಠಡಿಯ ಬಳಿಗೆ ಯಾವುದೇ ರಾಜಕೀಯ ಪಕ್ಷಗಳ ನೇತಾರರು ಸೇರಿದಂತೆ ಯಾವೊಬ್ಬರಿಗೂ ಅವಕಾಶ ನೀಡಲಾಗುತ್ತಿಲ್ಲ. ಎನ್‌ಐಟಿಕೆ ಆವರಣದ ಸುತ್ತ ಸುರತ್ಕಲ್ ಪೊಲೀಸರು ಮತ್ತು ಸಿಆರ್‌ಪಿಎ- ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿದೆ.

LEAVE A REPLY

Please enter your comment!
Please enter your name here