ಪುತ್ತೂರು : ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಜೀರ್ಣೋದ್ಧಾರ ಹಾಗೂ ಪುನಃ ಪ್ರತಿಷ್ಠಾಪನಾ ಕಾರ್ಯ ಶೋಭಕೃತ್ ನಾಮ ಸಂವತ್ಸರದ ವೈಶಾಖ ಕೃಷ್ಣ ಸಪ್ತಮಿಯ ಶುಕ್ರವಾರ ಬೆಳಗ್ಗೆ ಗಂಟೆ 8.22ಕ್ಕೆ ವೇದಮೂರ್ತಿ ಜಗದೀಶ ಭಟ್ ಭಟಪಾಡಿ ಇವರ ನೇತೃತ್ವದಲ್ಲಿ ಮೆ.12ರಂದು ನೆರವೇರಿತು. ಅಸಂಖ್ಯ ಮಂದಿ ಭಕ್ತರು ಮಹೋತ್ಸವಕ್ಕೆ ಆಗಮಿಸಿ, ಪ್ರಸಾದವನ್ನು ಸ್ವೀಕರಿಸಿದರು.
ಶ್ರೀ ಉಳ್ಳಾಲ್ತಿಯ ಈ ಮೂಲಸ್ಥಾನವನ್ನು ಸಂಪೂರ್ಣ ಶಿಲಾಮಯವನ್ನಾಗಿ ರೂಪಿಸಲಾಗಿದ್ದು, ಸುಮಾರು ರೂ.30 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ನಡೆದಿದೆ. ವೈದಿಕ ಪಾರಂಪರಿಕವಾಗಿ ಆರಾಧನೆ ನಡೆಯುತ್ತಿದ್ದು, ಮಾರ್ಚ್ ಹುಣ್ಣಿಮಯ ದಿನದ ಹೂವಿನ ಪೂಜೆ, ಚಂಡಿಕಾ ಹೋಮ, ಗಣಹೋಮ ನಡೆಯುವುದು ಇಲ್ಲಿನ ವಿಶೇಷವಾಗಿದೆ.
ಬಪ್ಪಳಿಗೆಯ ನಟ್ಟೋಜ ವಂಶಸ್ಥರ ಹಿಸ್ಸೆ ಜಾಗದಲ್ಲಿರುವ ಈ ಮೂಲಸ್ಥಾನದ ಧಾರ್ಮಿಕ ಕಾರ್ಯಗಳನ್ನು ಸುಬ್ರಹ್ಮಣ್ಯ ನಟ್ಟೋಜ ಹಾಗೂ ರಾಜಶ್ರೀ ಎಸ್. ನಟ್ಟೋಜ ದಂಪತಿ ನೆರವೇರಿಸಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ, ಶಾಸಕ ಸಂಜೀವ ಮಠಂದೂರು, ವಿಧಾನಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ, ಮಾಜಿ ಶಾಸಕಿ ಶಾಕುಂತಲಾ ಶೆಟ್ಟಿ, ಜೀರ್ಣೋದ್ಧಾರ ಹಾಗೂ ಪುನಃ ಪ್ರತಿಷ್ಠಪನಾ ಸಮಿತಿ ಗೌರವಾಧ್ಯಕ್ಷ ನಟ್ಟೋಜ ಶಿವಾನಂದ ರಾವ್, ಬಾಲಚಂದ್ರ ನಟ್ಟೋಜ, ಅಧ್ಯಕ್ಷ ಜಗನ್ನಿವಾಸ ರಾವ್, ಉಪಾಧ್ಯಕ್ಷರಾದ ಸೀತಾರಾಮ ಭಟ್, ರವಿಕೃಷ್ಣ ಡಿ. ಕಲ್ಲಾಜೆ, ಎನ್.ಎಸ್. ಶಾಂತರಾಮ ರಾವ್, ಎನ್.ಎಸ್.ದಿನೇಶ ರಾವ್, ಕಿರಣ್ ಕುಮಾರ್ ರೈ, ಕೆ. ಮಾಧವ ಗೌಡ, ಎನ್.ಎಸ್. ನಟರಾಜ್, ಜತೆ ಕಾರ್ಯದರ್ಶಿ ಕೃಷ್ಣ ರಾಜ ಎನ್.ಎಸ್., ಬೊಳ್ಳಾವ ವಿದ್ಯಾಶಂಕರ, ಬಲ್ನಾಡು ಪ್ರಸನ್ನ ಎನ್.ಭಟ್, ಕೋಶಾಧಿಕಾರಿ ಬಾಲಕೃಷ್ಣ ರಾವ್ ಎಂ. ಸದಸ್ಯರಾದ ಪ್ರಕಾಶ್ ಕಲ್ಲಾಡಿ, ಆನಂದ ಸುವರ್ಣ, ಅನಾರು ಬಾಲಕೃಷ್ನ ರಾವ್, ವಾಟೆ ಎಚ್.ವಿ.ಶಾಂತಾರಾಮ ರಾವ್, ಎಸ್.ಸುಬ್ಬರಾವ್, ಬಾಬು ಪೂಜಾರಿ, ಮದಕ ನಾರಾಯಣ ಗೌಡ, ಕೃಷ್ಣಪ್ಪ ಗೌಡ, ರಾಮಣ್ಣ ಗೌಡ ಕರ್ಕುಂಜ, ಬಾಳಪ್ಪ ಗೌಡ ಕರ್ಕುಂಜ, ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸವಣೂರು ಸೀತಾರಾಮ ರೈ ಮೊದಲಾದವರು ಉಪಸ್ಥಿತರಿದ್ದರು.