ಕುಂತೂರು: ಉರುಳಿಗೆ ಸಿಲುಕಿ ಹೆಣ್ಣು ಚಿರತೆ ಸಾವು

0

ಆಲಂಕಾರು : ಕುಂತೂರು ಕೇವಳ ಎಂಬಲ್ಲಿ ಎರಡು ವರ್ಷದ ಹೆಣ್ಣು ಚಿರತೆಯೊಂದು ಉರುಳಿಗೆ ಸಿಲುಕಿ ಆಹಾರ ಸೇವನೆ ಮಾಡಲು ಆಗದೇ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಭಾಗದಲ್ಲಿ ಚಿರತೆ ಸಂಚಾರದ ಇರುವ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಇಲಾಖೆ ಈ ಕುರಿತು ಕ್ರಮಕೈಗೊಳ್ಳುವ ಮೊದಲೇ ಯಾರೋ ಇಟ್ಟ ಉರುಳಿಗೆ ಬಿದ್ದು ಚಿರತೆ ಸಾವನ್ನಪ್ಪಿದೆ. ಚಿರತೆಯ ಸೊಂಟದ ಭಾಗ ಉರುಳಿಗೆ ಸಿಲುಕಿದ್ದರಿಂದ ಆಹಾರ ಸೇವನೆ ಮಾಡಲು ಆಗದೇ ಸಾವನ್ನಪ್ಪಿದೆ. ಅರಣ್ಯಾಧಿಕಾರಿಗಳು ಅರಿವಳಿಕೆ ತಜ್ಞರನ್ನು ಕರೆಸಿ ಮರುಳನ್ನು ತೆರವುಗೊಳಿಸಿ ಚಿರತೆಯನ್ನು ಬದುಕಿಸಲು ಪ್ರಯತ್ನಿಸಿದರು. ಆದರೆ ಫಲಕಾರಿಯಾಗಿರಲಿಲ್ಲ. ಬಿಸಿಲಿನ ತಾಪ ಹಾಗು ಆಹಾರ ಸೇವನೆಯನ್ನೂ ಮಾಡದ ಕಾರಣ ಚಿರತೆ ಸಾವನ್ನಪ್ಪಿದೆ. ಘಟನಾ ಸ್ಥಳಕ್ಕೆ ಎ.ಸಿ.ಎಫ್ ಪ್ರವೀಣ್ ಕುಮಾರ್ ಶೆಟ್ಟಿ,ಆರ್.ಎಫ್‌ಒ ಪಂಜದ ಗಿರೀಶ್, ಪಿಲಿಕುಳದ ವೈದ್ಯಾಧಿಕಾರಿಗಳು, ಉಪವಲಯಾರಣ್ಯಾಧಿಕಾರಿ ಜಯಕುಮಾರ್, ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಡಬದ ಪಶುವೈದ್ಯಾಧಿಕಾರಿ ಅಜೀತ್ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು.

LEAVE A REPLY

Please enter your comment!
Please enter your name here