ಕಡಬ: ದುರ್ಗಾಂಬಿಕಾ ದೇವಳದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

0

ಕಡಬ: ಇಲ್ಲಿನ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ 12ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬುಧವಾರ ಜರಗಿತು.

ಬೆಳಗ್ಗೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಮಹಾಗಣಪತಿ ಹೋಮ, ಚಂಡಿಕಾ ಯಾಗ ಹಾಗೂ ಪಂಚ ವಿಂಶತಿ ಕಲಶ ಪೂಜೆ ನೆರವೇರಿತು. ಮಧ್ಯಾಹ್ನ ಚಂಡಿಕಾಯಾಗದ ಪೂರ್ಣಾಹುತಿ, ಸುವಾಸಿನೀ ಪೂಜೆ, ಶ್ರೀದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಜರಗಿತು. ರಾತ್ರಿ
ಶ್ರೀ ದೇವರಿಗೆ ರಂಗಪೂಜೆ ಜರಗಿತು. ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಕೆದಿಲಾಯ ಅವರು ವೈದಿಕ ಕಾರ್ಯಗಳಲ್ಲಿ ಸಹಕರಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಏಕಾಹ ಭಜನಾ ಸಮಿತಿಯ ಅಧ್ಯಕ್ಷ ಅಜಿತ್ ರೈ ಆರ್ತಿಲ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಕಿಶನ್‌ಕುಮಾರ್ ರೈ ಪೆರಿಯಡ್ಕ, ಸೋಮಪ್ಪ ನಾಯ್ಕ್ ಕಡಬ, ಜಯರಾಮ ಗೌಡ ಪಡೆಜ್ಜಾರ್, ವೇಣುಗೋಪಾಲ ರೈ ಪಿಜಕ್ಕಳ, ಆನಂದ ಅಂಗಡಿಮನೆ, ಸವಿತಾ ಕಾಮತ್, ಹೇಮಲತಾ ಕುಕ್ಕೆರೆಬೆಟ್ಟು, ನಿವೃತ್ತ ತಹಶೀಲ್ದಾರ್ ರಾಘವೇಂದ್ರ ಆಚಾರ್ಯ, ಶ್ರೀ ಶ್ರೀಕಂಠ ಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುತ್ತುಕುಮಾರ್, ಸರಸ್ವತೀ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್, ಪ್ರಮುಖರಾದ ಪುಲಸ್ತ್ಯಾ ರೈ, ಸೀತಾರಾಮ ಗೌಡ ಎ., ಅಶೋಕ್‌ಕುಮಾರ್ ಪಿ., ಪ್ರಕಾಶ್ ಎನ್.ಕೆ., ಅಶೋಕ್ ಆಳ್ವ ಬೆದ್ರಾಜೆ, ಮೋನಪ್ಪ ಗೌಡ ನಾಡೋಳಿ ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here