ಪುತ್ತೂರು: ಭಾರತ ಸರಕಾರದ ರಕ್ಷಣಾ ಇಲಾಖೆಯ ಬೆಂಗಳೂರಿನ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಧೆ (DRDO) ಯ ಹಿರಿಯ ಮತ್ತು ಕಿರಿಯ ವಿಜ್ಞಾನಿಗಳು ಮತ್ತು ಅದರ ಆಪ್ತ ಸಹಕಾರ ತಂಡದಲ್ಲಿ ಸುಮಾರು 13 ಮಂದಿ ಮೇ 20 ರಂದು ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ಕೃಷಿ ಪ್ರವಾಸೋದ್ಯಮದ ದ್ಯೋತಕವಾಗಿ ಸಂದರ್ಶನ ನೀಡಿ ದಿನ ಪೂರ್ತಿ ಇದ್ದು ಸಮಗ್ರ ಕೃಷಿಯನ್ನು ಅವಲೋಕಿಸಿ ಕೃಷಿಕ್ಷೇತ್ರ ಸುತ್ತಾಡಿ ಕೃಷಿಯ ಬಗ್ಗೆ ಮಾಹಿತಿ ತಿಳಿದುಕೊಂಡರು. ಮುಂದಿನ ದಿನಗಳಲ್ಲಿ ಅದರಲ್ಲಿ ಕೆಲವರು ಕೃಷಿಯ ಬಗ್ಗೆ ಆಸಕ್ತಿ ಹೊಂದಿ ಕೃಷಿಕರಾಗುವ ಇರಾದೆಯನ್ನು ವ್ಯಕ್ತಪಡಿಸಿದರು.
ಸದ್ರಿ ಭೇಟಿಯು ಕಡಮಜಲು ಸುಭಾಸ್ ರೈಯವರ ಅಳಿಯ DRDO ಬೆಂಗಳೂರುಲ್ಲಿ ಹಿರಿಯ ವಿಜ್ಞಾನಿಯಾಗಿರುವ ಪ್ರಕೃತ ಪ್ರೋಜೆಕ್ಟ್ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ದುರ್ಗಾಪ್ರಸಾದ್ ಇವರ ನೇತೃತ್ವದಲ್ಲಿ ಜರುಗಿತು.
ವಿಜ್ಞಾನಿಗಳಾದ – ನರಸಿಂಹಮೂರ್ತಿ ಎಂ, ಸ್ವರೂಪ್, ಆಕಾಶ್, ರಾಘವೇಂದ್ರ, ಅರುಣ್, ಶ್ವೇತಾ,ಅನುಷಾ, ಕವಿತ, ಅರುಣ ಜ್ಯೋತಿ, ಶಾಂತಮ್ಮ, ನಿಖಿತಾ ಜೊತೆಗಿದ್ದರು. ಊಟ, ಉಪಹಾರ ವಸತಿಯನ್ನು ಉಚಿತವಾಗಿ ಕಡಮಜಲು ದಂಪತಿ ವ್ಯವಸ್ಧೆ ಮಾಡಿದ್ದರು.