ಪುತ್ತೂರು: ಬುಕ್ಸ್, ಸ್ಟೇಷನರಿ, ವಸ್ತ್ರಗಳು, ಆಟಿಕೆಗಳು, ಫ್ಯಾನ್ಸಿ ಸೇರಿದಂತೆ ವಿವಿಧ ಬಗೆಯ ಐಟಮ್ಸ್‌ಗಳನ್ನೊಳಗೊಂಡ ಮಳಿಗೆ `ವೈಟ್ ಹೌಸ್’ ಮೇ.22ರಂದು ಈಶ್ವರಮಂಗಲ ಹಿರಾ ಟವರ್‍ಸ್‌ನ 2ನೇ ಮಹಡಿಯಲ್ಲಿ ಶುಭಾರಂಭಗೊಂಡಿತು.
ಎಸ್‌ವೈಎಸ್ ಕೇಂದ್ರ ಸಮಿತಿ ಅಧ್ಯಕ್ಷ ಕೋಝಿಕ್ಕೋಡ್ ಖಾಝಿ ಸಯ್ಯದ್ ಮಹಮ್ಮದ್ ಕೋಯ ಜಮಲುಲೈಲಿ ತಂಙಳ್ ಮಳಿಗೆಯನ್ನು ಉದ್ಘಾಟಿಸಿ ದುವಾಶೀರ್ವಚನ ನೀಡಿ ಶುಭ ಹಾರೈಸಿದರು. ಕಾರ್ಯದರ್ಶಿ ಕೆಪಿಎಸ್ ತಂಙಳ್, ಈಶ್ವರಮಂಗಲ ಹನಿ ಸ್ವೀಟ್ಸ್‌ನ ಮಾಲಕ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಹಿರಾ ಕಾಂಪ್ಲೆಕ್ಸ್ ಮಾಲಕ ಅಬ್ದುಲ್ ಖಾದರ್ ಹಾಜಿ, ನೆ.ಮುಡ್ನೂರು ಗ್ರಾ.ಪಂ ಸದಸ್ಯ ಇಬ್ರಾಹಿಂ ಪಳ್ಳತ್ತೂರು, ಶರೀಫ್ ಅರ್ಶದಿ ಮುಗುಳಿ, ಇಸಾಕ್ ಪಡೀಲ್, ಇಬ್ರಾಹಿಂ ಮುಗುಳಿ, ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ, ಪಾಳ್ಯತ್ತಡ್ಕ ಮಸೀದಿಯ ಉಪಾಧ್ಯಕ್ಷ ಇಬ್ರಾಹಿಂ ಬಿ.ಸಿ, ಎಸ್ಕೆಎಸ್ಸೆಸ್ಸೆಫ್ ಈಶ್ವರಮಂಗಲ ಶಾಖಾಧ್ಯಕ್ಷ ಶಂಸುದ್ದೀನ್ ಈಂದುಮೂಲೆ, ಮಹಮ್ಮದ್ ಕುಂಬ್ರ, ಸಾದಿಕ್ ಕೋಲ್ಪೆ, ಮುನೀರ್ ಪಳ್ಳಂಗೋಡು, ಅಬ್ದುಲ್ ಜಬ್ಬಾರ್ ಯಮಾನಿ ಮಾಡನ್ನೂರು, ಅಬ್ದುಲ್ ರಝಾಕ್ ಮುಸ್ಲಿಯಾರ್ ಅಜ್ಜಾವರ, ಮುಂಡೋಳೆ ಖತೀಬ್ ಅಶ್ರಫ್ ರಹ್ಮಾನಿ ಮತ್ತಿತರ ಹಲವರು ಉಪಸ್ಥಿತರಿದ್ದರು. ಪಾಳ್ಯತ್ತಡ್ಕ ಖತೀಬ್ ನಝೀರ್ ಅಝ್ಹರಿ ಬೊಳ್ಮಿನಾರ್ ಸ್ವಾಗತಿಸಿದರು.
ಒಂದೇ ಸೂರಿನಡಿಯಲ್ಲಿ ಲಭ್ಯ:
ವೈಟ್ ಹೌಸ್ ಮಳಿಗೆಯಲ್ಲಿ ಎಲ್‌ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಯಿಂ ಡಿಗ್ರಿ ವರೆಗಿನ ಎಲ್ಲಾ ರೀತಿಯ ನೋಟ್ ಪುಸ್ತಕಗಳು, ಕಚೇರಿ ಬ್ಯಾಂಕ್, ಜೆರಾಕ್ಸ್ ಅಂಗಡಿಗಳಿಗೆ ಸಂಬಂಧಿಸಿದ ಪುಸ್ತಕಗಳು, ಮದರಸ ಪುಸ್ತಕಗಳು, ಶಾಲಾ ಕಾಲೇಜು ಮದರಸಕ್ಕೆ ಸಂಬಂಧಿಸಿದ ಸ್ಟೇಷನರಿ, ಶಾಲಾ ಬ್ಯಾಗ್ ಲಭ್ಯವಿದೆ. ಮದರಸ ಸಂಸ್ಥೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಜುಬ್ಬ, ಇಮಾರಾತಿ, ಸೌದಿ ಒಮಾನಿ ಕಂದೂರ ಬಿಳಿ ಉಡುಪುಗಳು, ಟೊಪ್ಪಿ, ಹಜ್ ಉಮ್ರಾ ಉಡುಪು, ದಫನ್ ಕಫನ್ ಕಿಟ್, ವಿವಿಧ ಬಗೆಯ ಸುಗಂಧ ದ್ರವ್ಯಗಳು, ಸ್ಪೋರ್ಟ್ಸ್ ಐಟಂಗಳು, ಟಾಯ್ಸ್, ಗಿಫ್ಟ್ ಐಟಮ್ಸ್, ಫ್ಯಾನ್ಸಿ ಐಟಮ್ಸ್ ಲಭ್ಯವಿದೆ ಎಂದು ವೈಟ್ ಹೌಸ್ ಬ್ಯುಸಿನೆಸ್ ಆಂಡ್ ಮಾರ್ಕೆಟಿಂಗ್ ಸೆಲ್‌ನ ಮುಖ್ಯಸ್ಥರು ತಿಳಿಸಿದ್ದಾರೆ.