ಕಲ್ಲೆಟ್ಟಿ ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನಕ್ಕೆ ಹರಿದುಬಂದ ಹಸಿರುವಾಣಿ ಹೊರೆಕಾಣಿಕೆ-ಧಾರ್ಮಿಕ ಸಭೆ

0

ನಮ್ಮೊಳಗಿನ ಆತ್ಮ ವಿಶ್ವಾಸ ಹೆಚ್ಚಿಸುವಲ್ಲಿ ಧಾರ್ಮಿಕ ಕ್ಷೇತ್ರಗಳ ಪಾತ್ರ ಮಹತ್ವದ್ದು: ನೀಲೇಶ್ವರ ತಂತ್ರಿ

ನಂಬಿಕೆ ಬೇಕು ಮೂಢನಂಬಿಕೆ ಇರಬಾರದು: ಮನೋಜ್ ಕುಮಾರ್ ಕಟ್ಟೆಮಾರ್
ಜೀವನದಲ್ಲಿ ಪ್ರಯತ್ನವಿದ್ದರೆ ಯಾವುದನ್ನೂ ಸಾಧಿಸಲು ಸಾಧ್ಯ: ಮಹಾಲಿಂಗ ನಾಯ್ಕ್ ಅಮೈ

ವಿಟ್ಲ: ದೈವಿಕ ಉಪಾಸನೆ ಎಂದರೆ ವೈದಿಕ ಸಂಪ್ರದಾಯಗಳಿಂದ ವ್ಯತ್ಯಸ್ತವಾದುದು. ದೈವದೇವರ ಆರಾಧನೆಯಲ್ಲಿ ನಮ್ಮ ಭವಿಷ್ಯವಿದೆ. ದೈವ ದೇವರ ಉಪಾಸನೆ ಜೀವನದಲ್ಲಿ ಅತೀ ಅಗತ್ಯ. ನಿಮ್ಮೊಳಗಿನ ಕಲೆಯ ಉಪಾಸನೆ ನಡೆಯಬೇಕು. ನಮ್ಮೊಳಗಿನ ಆತ್ಮ ವಿಶ್ವಾಸ ಹೆಚ್ಚಿಸುವಲ್ಲಿ ಧಾರ್ಮಿಕ ಕ್ಷೇತ್ರಗಳ ಪಾತ್ರ ಮಹತ್ವದ್ದು. ಪ್ರತಿಯೋರ್ವನ ಶ್ರಮಕ್ಕೂ ಅದರದ್ದೇ ಆದ ಬೆಲೆ ಇದೆ ಎಂದು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿರವರು ಹೇಳಿದರು.

ಅವರು ಮೇ.22ರಂದು ಬಂಟ್ವಾಳ ತಾಲೂಕು ಬರಿಮಾರು ಗ್ರಾಮದ ಕಲ್ಲೆಟ್ಟಿ ಶ್ರೀ ಮಹಾಗುರು ಸಿದ್ಧಮರ್ದ ಬೈದ್ಯರ ಸಾನಿಧ್ಯ, ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದಲ್ಲಿ ನಡೆದ ಪ್ರಥಮ ದಿನದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ತುಳುನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿದು ಅದರ ವೈಶಿಷ್ಟ್ಯವನ್ನು ನಾಡಿಗೆ ಪಸರಿಸುವ ಕೆಲಸ ಈ ಕ್ಷೇತ್ರದಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ.
ತುಳುನಾಡು ಎನ್ನುವಾಗ ನಾವದರ ಸೀಮೆಯ ಬಗ್ಗೆ ತಿಳಿದುಕೊಳ್ಳಬೇಕು. ಸುಸಂಸ್ಕೃತ ಸಮಾಜ ಕಟ್ಟುವಲ್ಲಿ ಬಿಲ್ಲವರ ಪಾತ್ರ ಮಹತ್ವದ್ದು. ತುಳುನಾಡಿನಲ್ಲಿ ಕಾಲಕಾಲಕ್ಕೆ ದೈವದೇವರ ಆರಾಧನೆ ನಿರಂತರವಾಗಿ ನಡೆಯುತ್ತಿದೆ ಎಂದರು.

ಅಮ್ಟೂರು ಕಟ್ಟೆಮಾರ್ ಶ್ರೀ ಮಂತ್ರದೇವತಾ ಸಾನ್ನಿಧ್ಯದ ಧರ್ಮದರ್ಶಿ ಮನೋಜ್ ಕುಮಾರ್ ಕಟ್ಟೆಮಾರ್ ರವರು ಧಾರ್ಮಿಕ ಉಪನ್ಯಾಸ ನೀಡಿ ನಂಬಿಕೆ ಬೇಕು ಮೂಢನಂಬಿಕೆ ಇರಬಾರದು. ನಮ್ಮ ಜನ ಮೂಢನಂಬಿಕೆಯ ಹಿಂದೆ ಬಿದ್ದಿದ್ದಾರೆ. ನಾವು ಮಾನಸಿಕ ಪ್ರಬುದ್ಧರಾಗಬೇಕು. ನಿರ್ಮಲ ಭಕ್ತಿಯಿಂದ ಪ್ರಾರ್ಥಿಸಿದರೆ ನಮ್ಮ ಸರ್ವತಾ ಕಷ್ಟ ದೂರವಾಗುವುದು. ಗ್ರಾಮ ದೇವರ ಪ್ರಸಾದಕ್ಕೆ ನಮ್ಮೆಲ್ಲಾ ಕಷ್ಟಗಳನ್ನು ನೀಗಿಸುವ ಶಕ್ತಿಯಿದೆ ಎಂದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕ ಅಮೈರವರು ಮಾತನಾಡಿ ಜೀವನದಲ್ಲಿ ಪ್ರಯತ್ನವಿದ್ದರೆ ಯಾವುದನ್ನೂ ಸಾಧಿಸಲು ಸಾಧ್ಯ. ಯುವ ಪೀಳಿಗೆ ಕೃಷಿಯತ್ತ ಒಲವು ತೋರುವ ಕೆಲಸವಾಗಬೇಕು. ಸಾವಯವ ಕೃಷಿಗೆ ಪ್ರೋತ್ಸಾಹ ಅಗತ್ಯ ಎಂದರು.

ಕನ್ನಡ ಚಲನಚಿತ್ರ ನಟಿ ಸಪ್ತ ಪಾವೂರು, ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷರಾದ ಮೋಹನ ಗೌಡ ಇಡ್ಯಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಲತೇಶ್ ಕುಂಬ್ಳೆ ದೆಹಲಿ, ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜಗದೀಶ್ ಎಸ್. ಪೂಜಾರಿ, ಬೆಂಗಳೂರಿನ ಹೈಕೋರ್ಟ್ ವಕೀಲರಾದ ಚಿದಾನಂದ ಬಂಗೇರ ಕಲ್ಲಾಪು, ಬರಿಮಾರು ಗ್ರಾಮ ಪಂಚಾಯತ್ ಸದಸ್ಯರಾದ ಶೃತಿ ಗೋಪುಕೋಡಿ, ಕೋಟಿ ಬಂಗೇರ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಂಚನ ಮತ್ತು ಬಳಗದವರು ಪ್ರಾರ್ಥಿಸಿದರು. ಅನ್ನಸಂತರ್ಪಣೆ ಮತ್ತು ಪಾಕಶಾಲೆ ಸಮಿತಿ ಸಂಚಾಲಕರಾದ ಜಯಂತ ಪಂಜುರ್ಲಿ ಗುಡ್ಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹರಿಕೃಷ್ಣ ಬರಿಮಾರು ವಂದಿಸಿದರು. ರಾಜೇಶ್ ಎಸ್ ಬಲ್ಯ, ವಿಶ್ಮಿತಾಮಧುಕರ ಕುರಮಜಲುಗುತ್ತು ಕಾರ್ಯಕ್ರಮ ನಿರೂಪಿಸಿದರು.

ಧಾರ್ಮಿಕ ಕಾರ್ಯಕ್ರಮ:
ಮೇ.22ರಂದು ಬೆಳಗ್ಗೆ ಗಂಟೆ 6ರಿಂದ ಶ್ರೀ ಕಾನಲ್ತಾಯ ಮಹಾಕಾಳಿ ಭಜನಾ ಮಂಡಳಿ ಕಲ್ಲೆಟ್ಟಿ ಇವರ ಸಹಕಾರದೊಂದಿಗೆ ಅರ್ಧ ಏಕಾಹ ಭಜನೆ ನಡೆದು ಸಾಯಂಕಾಲ ಭಜನಾ ಮಂಗಳೋತ್ಸವ ನಡೆಯಿತು. ಬೆಳಗ್ಗೆ ಕೆ. ಆರ್. ಪುರಂದರ ಕುಬನೂರಾಯ ಮಹಾಕಾಳಿಬೆಟ್ಟು ಬರಿಮಾರು ಇವರು ದೀಪಬೆಳಗಿಸಿ ಉಗ್ರಾಣ ಮುಹೂರ್ತ ನಡೆಸಿದರು. ಸಾಯಂಕಾಲ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ ನಡೆಯಿತು. ಬಳಿಕ ದೇವತಾ ಪ್ರಾರ್ಥನೆ, ಬಿಂಬ ಪರಿಗ್ರಹ, ಬಿಂಬ ಜಲಾಧಿವಾಸ, ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ವಾಸ್ತು ರಕ್ಷೋಘ್ನ ಹೋಮ, ವಾಸ್ತು ಬಲಿ ನಡೆದು ಅನ್ನಸಂತರ್ಪಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ: ಊರ ಕಲಾಭಿಮಾನಿಗಳ ಸಮ್ಮಿಲನದೊಂದಿಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕೊಳಲು ವಾದನ. ನಡೆಯಿತು.
ಶ್ರೀ ಮಹಾಗುರು ಸಿದ್ಧಮರ್ದ ಬೈದ್ಯರ ತುಳು ಕಥಾ ರೂಪಕ ಭಕ್ತಿ ಪ್ರಧಾನ ಹಾಗೂ ಜಾನಪದ ನೃತ್ಯ ನಡೆಯಿತು.

ಇಂದು ದೈವಸ್ಥಾನದಲ್ಲಿ :
ದೈವಸ್ಥಾನದಲ್ಲಿ ಮೇ.23ರಂದು ಬೆಳಗ್ಗೆ ಶ್ರೀ ಗಣಪತಿ ಹೋಮ, ಬಿಂಬಶುದ್ಧಿ, ಅನುಜ್ಞಾಕಲಶಾಭಿಷೇಕ, ಅನುಜ್ಞಾ ಪ್ರಾರ್ಥನೆ, ಜೀವೋದ್ವಾಸನೆ, ಜೀವ ಕಲಶ, ಶಯ್ಯಾಗಮನ, ಶಯನ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ 6ರಿಂದ ಅಧಿವಾಸ ಹೋಮ, ಧ್ಯಾನಾಧಿವಾಸ, ಕಲಶ ಪೂಜೆ, ಕಲಶಾಧಿವಾಸದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ:
ಮಧ್ಯಾಹ್ನ ಗಂಟೆ 1.30ರಿಂದ ಕವಿರತ್ನ ಕಾಳಿದಾಸ ತುಳು ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ರಾತ್ರಿ ಗಂಟೆ 7.30ರಿಂದ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್, ಮಂಜೇಶ್ವರ ಅಭಿನಯಿಸುವ ಮಲ್ಲ ಸಂಗತಿಯೇ ಅತ್ತ್ ತುಳು ಹಾಸ್ಯಮಯ ನಾಟಕ ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮ:
ಸಾಯಂಕಾಲ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕೇಮಾರಿನ ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ವೇದಮೂರ್ತಿ ಕಶೆಕೋಡಿ ಸೂರ್ಯನಾರಾಯಣ ಭಟ್ ರವರು ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಮೋಹನ್ ಗೌಡ ಇಡ್ಯಡ್ಕರವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವೈಭವದ ಹಸಿರುವಾಣಿ ಮೆರವಣಿಗೆ

ದೈವಸ್ಥಾನದಲ್ಲಿ ಮೇ.25ರ ವರೆಗೆ ನಡೆಯಲಿರುವ ಕಲಶೋತ್ಸವ ಮತ್ತು ನೇಮೋತ್ಸವದ ಅಂಗವಾಗಿ ಮೇ.22 ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆಗೊಂಡಿತು. ಹೊರೆಕಾಣಿಕೆ ಮೆರವಣಿಗೆಗೆ ಮಾಣಿಯ ಗಾಂಽ ಮೈದಾನದಲ್ಲಿ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಸಚಿನ್ ರೈ ಮಾಣಿಗುತ್ತುರವರು ಚಾಲನೆ ನೀಡಿದರು.

LEAVE A REPLY

Please enter your comment!
Please enter your name here