





ಆರೋಗ್ಯ ಪೂರ್ಣ ಸಮಾಜ ನಿರ್ಮಾಣಗೊಳ್ಳಲು ಇಂತಹ ಶಿಬಿರಗಳು ಅಗತ್ಯ: ಒಡಿಯೂರು ಶ್ರೀ


ವಿಟ್ಲ: ಆರೋಗ್ಯ ಪೂರ್ಣ ಸಮಾಜ ನಿರ್ಮಾಣಗೊಳ್ಳಲು ಇಂತಹ ಶಿಬಿರಗಳು ಅಗತ್ಯ. ನಮ್ಮ ಬದುಕಿನಲ್ಲಿ ಪರಸ್ಪರ ಸಹಕಾರದಿಂದಾಗಿ ಬಾಳಿದಾಗ ಜೀವನ ಸಾರ್ಥಕವಾಗುತ್ತದೆ. ಶಿಸ್ತು ಬದ್ಧತೆಯಿಂದ ಜೀವನ ಸಾಗಬೇಕು. ಮನುಷ್ಯ ಪರೋಪಕಾರಿಯಾಗಿ ಬದುಕಿನಲ್ಲಿ ನಡೆಯಬೇಕು. ನಿಶ್ವಾರ್ಥ ಸೇವೆ ಮಾಡಿದಾಗ ಸುಂದರ ಸಮಾಜ ನಿರ್ಮಾಣವಾಗುತ್ತದೆ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿರವರು ಹೇಳಿದರು.





ಅವರು ಒಡಿಯೂರು ಶ್ರೀ ವಿವಿದೋದ್ಧೇಶ ಸೌಹಾರ್ದ ಸಹಕಾರಿ ಸಂಘ, ರೋಟರಿ ಕ್ಲಬ್ ಮಂಗಳೂರು ಸನ್ ರೈಸ್, ಲಯನ್ಸ್ ಕ್ಲಬ್ ಮಂಗಳದೇವಿ ಮಂಗಳೂರು, ನಿಟ್ಟೆ ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿ, ಎ.ಜೆ ದಂತ ವೈದ್ಯಕೀಯ ಮಹಾವಿದ್ಯಾಲಯ ಮಂಗಳೂರು, ಮಣಿನಾಲ್ಕೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸರಪಾಡಿ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಮತ್ತು ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಸರಪಾಡಿ ಸುಬ್ಬಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆದ ಬೃಹತ್ ಉಚಿತ ವೈದ್ಯಕೀಯ ಶಿಬಿರ ಹಾಗೂ ಸಮಗ್ರ ಸುಸ್ಥಿರ ಕೃಷಿಯ ಮಾಹಿತಿ, ಕಿಟ್ ವಿತರಣೆ ಕಾರ್ಯಕ್ರಮ ಮತ್ತು ಜೇನು ಸಾಕಣೆ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ದೀಪಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಪ್ರಕೃತಿಯಲ್ಲಿ ಎಲ್ಲವೂ ಇದೆ. ಅದನ್ನು ಬಳಸುವ ರೀತಿ ತಿಳಿಯಬೇಕು. ಪ್ರಕೃತಿಯನ್ನು ಬಿಟ್ಟು ಭಗವಂತವಿಲ್ಲ. ನಾವು ಬದುಕಬೇಕಾದರೆ ಭಾರತೀಯತೆ ಬೇಕು. ಅದನ್ನು ಬಿಟ್ಟರೆ ಜೀವನ ನಡೆಸಲು ಸಾಧ್ಯವಿಲ್ಲ. ಯಾಂತ್ರಿಕ ಬದುಕಿನಲ್ಲಿ ತತ್ವ ಚಿಂತನೆ ಅಗತ್ಯವಾಗಿ ಬೇಕು. ಪ್ರಕೃತಿ ಆಮ್ಲಜನಕ ನೀಡುತ್ತಿದ್ದು, ಅದರ ಋಣ ತೀರಿಸುವ ಕೆಲಸ ಆಗಬೇಕು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನಾಟಿ ವೈದ್ಯ ಯಾಕುಬ್ ಬ್ಯಾರಿ, ರುಕ್ಮಯ್ಯ ಪೂಜಾರಿ ಕಿನಿಲ, ಆಟೋ ಚಾಲಕಿ ಪೂರ್ಣಿಮ, ಸ್ವಚ್ಛವಾಹಿನಿಯ ಚಾಲಕಿ ಭವಾನಿ ಬಟ್ಟನಾಡಿ, ಯಶೋಧರವರನ್ನು ಸನ್ಮಾನಿಸಲಾಯಿತು. ಬಳಿಕ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಸೋಲರ್ ಸಿಸ್ಟಮ್, ಜೇನು ಗೂಡು, ಗಂಧದ ಸಸಿ, ಮೈಕ್ರೋ ಬಿ ಕೃಷಿ ಕಿಟ್ ವಿತರಿಸಲಾಯಿತು.
ರೋಟರಿ ಕ್ಲಬ್ ಮಂಗಳೂರು ಸನ್ ರೈಸ್ ಇದರ ಅಧ್ಯಕ್ಷ ಮನೀಶ್ ಜಲಾನ್, ರೋಟರಿ ಕ್ಲಬ್ ನ ಸಹಾಯಕ ಗವರ್ನರ್ ಡಾ. ಚಿನ್ನಗಿರಿ ಗೌಡ, ಕಣ್ಣಿನ ವೈದ್ಯರಾದ ಡಾ. ವಿಜಯ ಪೈ, ಪಾರಾದೀಪ್ ಫಾಸ್ಪೇಟ್ಸ್ ಲಿಮಿಟೆಡ್ ಪಣಂಬೂರು ಇದರ ಗಿರೀಶ್ , ಮಂಗಳೂರು ಮಂಗಳದೇವಿ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಪೂಂಜ, ಕಾರ್ಯದರ್ಶಿ ದಿನೇಶ್ ಕುಮಾರ್, ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ನ ಗುರುಪ್ರಕಾಶ್ ಶೆಟ್ಟಿ, ಮಣಿನಾಲ್ಕೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಧಾಕೃಷ್ಣ ಮಯ್ಯ, ಮೈಕ್ರೋ ಬಿ ಅಗ್ರೋಟೆಕ್ ಪ್ರೈವೇಟ್ ಲಿಮಿಟೆಡ್ ನ ಝೋನಲ್ ಹೆಡ್ ಶ್ರೀಕಾಂತ್ , ಗ್ರಾಮ ಜನ್ಯ ಫಾರ್ಮರ್ಸ್ ನ ರಾಮ್ ಪ್ರತೀಕ್ , ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಧಿಕಾರಿ ಮಾಂತೇಶ್ ಭಂಡಾರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಒಡಿಯೂರು ಶ್ರೀ ವಿವಿದೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಎ. ಸುರೇಶ್ ರೈ ಸ್ವಾಗತಿಸಿದರು. ಲೋಕೇಶ್ ರೈ ಬಾಕ್ರಬೈಲು ನಿರೂಪಿಸಿದರು. ಒಡಿಯೂರು ಶ್ರೀ ವಿವಿದೋದ್ಧೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು ಸಹಕರಿಸಿದರು.










